ಭಾನುವಾರ, ಮಾರ್ಚ್ 29, 2020
19 °C

ವಿಂಡೀಸ್‌ಗೆ ಸುಲಭ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ವೆಸ್ಟ್‌ ಇಂಡೀಸ್‌ ತಂಡ ನಿರೀಕ್ಷೆಯಂತೆ ಏಕೈಕ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಶುಕ್ರವಾರ 9 ವಿಕೆಟ್‌ಗಳಿಂದ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿತು.

ಗುರುವಾರ, ಎರಡನೇ ದಿನದಾಟದ ಕೊನೆಗೆ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 109 ರನ್‌ ಗಳಿಸಿದ್ದ ಅಫ್ಗಾನಿಸ್ತಾನ 120 ರನ್‌ಗಳಿಗೆ ಕುಸಿಯಿತು. ಎಂಟು ಮಂದಿ ಒಂದಂಕಿ ಮೊತ್ತ ದಾಟಲು ವಿಫಲರಾದರು. ಜೇಸನ್‌ ಹೋಲ್ಡರ್‌, ರಖೀಮ್‌ ಕಾರ್ನ್‌ವಾಲ್‌ ಮತ್ತು ರಾಸ್ಟನ್‌ ಚೇಸ್‌ ತಲಾ ಮೂರು ವಿಕೆಟ್‌ ಪಡೆದರು.

140 ಕೆ.ಜಿ. ತೂಕದ ದೈತ್ಯ ಆಫ್‌ ಸ್ಪಿನ್ನರ್‌ ರಖೀಮ್‌ ಕಾರ್ನ್‌ವಾಲ್‌ ಈ ಪಂದ್ಯದಲ್ಲಿ 10 ವಿಕೆಟ್‌ಗಳೊಡನೆ ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಏಳು ವಿಕೆಟ್ ಕಬಳಿಸಿದ್ದರು. ಪಂದ್ಯದ ಆಟಗಾರ ಗೌರವವೂ ಆರು ಅಡಿ, ಐದು ಇಂಚು ಎತ್ತರದ ಈ ಆಟಗಾರನದಾಯಿತು.

ಗೆಲುವಿಗೆ ಅಗತ್ಯವಿದ್ದ 31 ರನ್‌ಗಳನ್ನು ಕೆರೀಬಿಯನ್ನರು ಕ್ರೆಗ್‌ ಬ್ರಾತ್‌ವೇಟ್‌ (8) ಅವರ ವಿಕೆಟ್‌ ನಷ್ಟದಲ್ಲಿ ತಲುಪಿದರು. ಕ್ಯಾಂಪ್‌ಬೆಲ್‌ ಅಜೇಯ 19 ರನ್‌ ಮತ್ತು ಶಾಯಿ ಹೋಪ್‌ ಅಜೇಯ 6 ರನ್‌ಗಳೊಡನೆ ಗೆಲುವಿನ ವಿಧಿ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್‌: ಅಫ್ಗಾನಿಸ್ತಾನ: 187 ಮತ್ತು 120 (ಜಾವೆದ್ ಅಹಮದಿ 62; ಹೋಲ್ಡರ್‌ 20ಕ್ಕೆ3, ಕಾರ್ನ್ವಾಲ್‌ 46ಕ್ಕೆ3, ಚೇಸ್‌ 10ಕ್ಕೆ3); ವೆಸ್ಟ್‌ ಇಂಡೀಸ್‌: 277 ಮತ್ತು 1 ವಿಕೆಟ್‌ಗೆ 33.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು