ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

West Indies vs Sri Lanka| ಡರೆನ್ ಬ್ರಾವೊ ಶತಕದ ರಂಗು

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ವೆಸ್ಟ್ ಇಂಡೀಸ್‌
Last Updated 15 ಮಾರ್ಚ್ 2021, 12:05 IST
ಅಕ್ಷರ ಗಾತ್ರ

ನಾರ್ತ್‌ ಪಾಯಿಂಟ್‌, ಆಂಟಿಗಾ: ಡರೆನ್ ಬ್ರಾವೊ (102) ಅವರ ಸೊಗಸಾದ ಶತಕದ ಬಲದಿಂದ ವೆಸ್ಟ್ ಇಂಡೀಸ್ ತಂಡವು ಮೂರನೇ ಹಾಗೂ ಅಂತಿನ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಇದರೊಂದಿಗೆ ಮೂರುಏಕದಿನ ಪಂದ್ಯಗಳ ಸರಣಿಯನ್ನು 3–0ಯಿಂದ ಕ್ಲೀನ್‌ಸ್ವೀಪ್ ಮಾಡಿತು.

ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ ಶ್ರೀಲಂಕಾ 6 ವಿಕೆಟ್‌ ಕಳೆದುಕೊಂಡು 274 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಉತ್ತರವಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಡರೆನ್ ಬ್ರಾವೊ (132 ಎಸೆತ, 5 ಬೌಂಡರಿ, 4 ಸಿಕ್ಸರ್‌) ಹಾಗೂ ಆರಂಭಿಕ ಆಟಗಾರ ಶಾಯ್ ಹೋಪ್ (64, 72 ಎಸೆತ, 3 ಬೌ, 2 ಸಿ.) ಮೂರನೇ ವಿಕೆಟ್ ಜೊತೆಯಾಟದಲ್ಲಿ 109 ರನ್‌ ಗಳಿಸಿಕೊಟ್ಟರು. ಕೊನೆಯಲ್ಲಿ ಪೊಲಾರ್ಡ್‌ (ಔಟಾಗದೆ 53) ಬಿರುಸಿನ ಆಟವಾಡಿದರು. ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ತಂಡ ಗೆಲುವಿನ ದಡ ತಲುಪಿತು.

ಶ್ರೀಲಂಕಾ ಬ್ಯಾಟಿಂಗ್‌ನಲ್ಲಿ ವನಿಂದು ಹಸರಂಗ (ಔಟಾಗದೆ 80) ಹಾಗೂ ಆಶೆನ್ ಬಂಡಾರ (ಔಟಾಗದೆ 55) ಮಿಂಚಿದರು. ಹಸರಂಗ ಅವರಿಗೆ ಇದು ಮೊದಲ ಅರ್ಧಶತಕವಾಗಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 274 (ಆಶೆನ್ ಬಂಡಾರ ಔಟಾಗದೆ 55, ವನಿಂದು ಹಸರಂಗ ಡಿಸಿಲ್ವಾ ಔಟಾಗದೆ 80, ಧನುಷ್ಕ ಗುಣತಿಲಕ 36, ದಿಮುತ್ ಕರುಣರತ್ನೆ 31; ಅಖಿಲ್ ಹೊಸೇನ್‌ 33ಕ್ಕೆ 3, ಜೇಸನ್ ಮೊಹಮ್ಮದ್‌ 49ಕ್ಕೆ 1, ಅಲ್ಜರಿ ಜೋಸೆಫ್‌ 51ಕ್ಕೆ 1). ವೆಸ್ಟ್ ಇಂಡೀಸ್‌: 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 276 (ಡರೆನ್ ಬ್ರಾವೊ 102, ಶಾಯ್ ಹೋಪ್‌ 64, ಕೀರನ್ ಪೊಲಾರ್ಡ್‌ ಔಟಾಗದೆ 53; ಸುರಂಗ ಲಕ್ಮಲ್‌ 56ಕ್ಕೆ 2, ಧನುಷ್ಕ ಗುಣತಿಲಕ 28ಕ್ಕೆ 1, ತಿಸಾರ ಪೆರೇರ 27ಕ್ಕೆ 1, ವನಿಂದು ಹಸರಂಗ ಡಿಸಿಲ್ವಾ 49ಕ್ಕೆ 1). ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 5 ವಿಕೆಟ್‌ಗಳ ಜಯ, ಮೂರು ಪಂದ್ಯಗಳ ಸರಣಿಯಲ್ಲಿ 3–0 ಜಯ. ಪಂದ್ಯಶ್ರೇಷ್ಠ: ಡರೆನ್ ಬ್ರಾವೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT