ಬಾಂಗ್ಲಾ ಎದುರಿನ ಏಕದಿನ ಪಂದ್ಯಕ್ಕೆ ಡರೆನ್‌ ಬ್ರಾವೊ

7

ಬಾಂಗ್ಲಾ ಎದುರಿನ ಏಕದಿನ ಪಂದ್ಯಕ್ಕೆ ಡರೆನ್‌ ಬ್ರಾವೊ

Published:
Updated:

ಢಾಕಾ: ವೆಸ್ಟ್‌ ಇಂಡೀಸ್‌ನ ಬ್ಯಾಟ್ಸ್‌ಮನ್‌ ಡರೆನ್‌ ಬ್ರಾವೊ ಅವರು ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯಲ್ಲಿ  ಆಡಲಿದ್ದಾರೆ.

ಎರಡು ವರ್ಷಗಳಿಂದ ಏಕದಿನ ಪಂದ್ಯಗಳಿಂದ ಬ್ರಾವೊ ದೂರ ಉಳಿದಿದ್ದರು.  2016ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಎದುರಿನ ಏಕದಿನ ಪಂದ್ಯದಲ್ಲಿ 96 ರನ್‌ ಗಳಿಸಿದ್ದರು. ನಂತರ ಅವರು ಆಡಿರಲಿಲ್ಲ. ಇತ್ತೀಚೆಗೆ ತಂಡಕ್ಕೆ ಮರಳಿದ್ದ ಅವರು, ಭಾರತ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡಿದ್ದರು. 

ಭಾನುವಾರ ಢಾಕಾದಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ ಟ್ವೆಂಟಿ–20ಯಿಂದ ದೂರ ಉಳಿದಿದ್ದ ಕಾರ್ಲೋಸ್‌ ಬ್ರಾಥ್‌ವೇಟ್‌ ಮತ್ತು ರೊಸ್ಟನ್‌ ಚೇಸ್‌ ಕೂಡ ಆಡಲಿದ್ದಾರೆ.

ಭಾರತ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡಿದ್ದ ಫ್ಯಾಬಿಯೆನ್ ಅಲೆನ್‌, ಚಂದ್ರಪಾಲ್‌ ಹೇಮರಾಜ್‌ ಮತ್ತು ಒಷಾನ್ ಥಾಮಸ್‌ ಸ್ಥಾನ ಉಳಿಸಿಕೊಂಡಿದ್ದಾರೆ.  ಗಾಯಗೊಂಡಿರುವ ಜೇಸನ್‌ ಹೋಲ್ಡರ್‌ ಅವರ ಬದಲಾಗಿ ಬ್ಯಾಟ್ಸ್‌ಮನ್‌ ರೋವನ್‌ ಪೊವೆಲ್‌ ಅವರು ತಂಡದ ಹಂಗಾಮಿ ನಾಯಕರಾಗಿ ಮುಂದುವರೆಯಲಿದ್ದಾರೆ. 

ತಂಡ ಇಂತಿದೆ: ರೋವನ್‌ ಪೊವೆಲ್‌ (ನಾಯಕ), ಮರ್ಲಾನ್‌ ಸ್ಯಾಮುಯೆಲ್ಸ್‌, ದೇವೇಂದ್ರ ಬಿಶೂ, ರೋಸ್ಟನ್‌ ಚೇಸ್‌, ಚಂದ್ರಪಾಲ್ ಹೇಮರಾಜ್‌, ಶಿಮ್ರಾನ್‌ ಹೆಟ್ಮೆಯರ್‌, ಡರೆನ್‌ ಬ್ರಾವೊ, ಶಾಯ್‌ ಹೋಪ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಕೀಮ ಪೌಲ್‌, ಕೀರನ್‌ ‍ಪೊವೆಲ್‌, ಫ್ಯಾಬಿಯಾನ್‌ ಅಲೆನ್‌,
ಕೆಮರ್‌ ರೋಚ್‌, ಸುನಿಲ್‌ ಅಂಬ್ರಿಸ್‌, ಒಷಾನ್ ಥಾಮಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !