ನವದೆಹಲಿ: ಭಾರತದಲ್ಲಿ ಈಚೆಗೆ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ವೆಸ್ಟ್ ಇಂಡೀಸ್ ತಂಡದ ಆಟಗಾರರು ತಮ್ಮ ತವರಿಗೆ ಸುರಕ್ಷಿತವಾಗಿ ತಲುಪಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ. ಆದ್ದರಿಂದ ಟೂರ್ನಿ ಮುಗಿದ ನಂತರ ತಮ್ಮ ದೇಶಕ್ಕೆ ತೆರಳಲು ವಿಂಡೀಸ್ ಆಟಗಾರರಿಗೆ ಕೂಡಲೇ ಅನುಕೂಲವಾಗಿರಲಿಲ್ಲ. ಆದ್ದರಿಂದ ಅವರು ಮೂರು ದಿನಗಳ ಹಿಂದಷ್ಟೇ ಪ್ರಯಾಣ ಆರಂಭಿಸಿದ್ದರು. ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರು ಕೋಲ್ಕತ್ತದಲ್ಲಿ ಉಳಿದುಕೊಂಡಿದ್ದರು.

‘ನಮ್ಮ ತಂಡದ ಆಟಗಾರರ ಅಂತಿಮ ಬ್ಯಾಚ್ ಸ್ವದೇಶಕ್ಕೆ ಮರಳಿದೆ. ಸುರಕ್ಷಿತವಾದ ಪ್ರಯಾಣ ವ್ಯವಸ್ಥೆಯಲ್ಲಿ ಅವರು ಬಂದು ತಲುಪಿದ್ದಾರೆ. ತಮ್ಮ ತಮ್ಮ ಮನೆಗಳಿಗೆ ಅವರೆಲ್ಲರೂ ತೆರಳಿದ್ದಾರೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತಿಳಿಸಿದೆ. ಐಸಿಸಿ ಮತ್ತು ಸ್ಥಳೀಯ ಕ್ರಿಕೆಟ್ ಮಂಡಳಿಗೆ ಕೃತಜ್ಞತೆ ಸಲ್ಲಿಸಿದೆ.

ಕಳೆದ ವಾರ ವೆಸ್ಟ್ ಇಂಡೀಸ್ನ 9 ಆಟಗಾರರು ತೆರಳಿದ್ದರು. ಉಳಿದ 16 ಆಟಗಾರರಿಗೆ ವಿಶೇಷ ವಿಮಾನದ ಮೂಲಕ ಕರೆದೊಯ್ಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.