ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ರಹಾನೆ ಶತಕ ಗೆಲುವಿನ ಹಾದಿಯಲ್ಲಿ ಭಾರತ

Last Updated 25 ಆಗಸ್ಟ್ 2019, 19:59 IST
ಅಕ್ಷರ ಗಾತ್ರ

ನಾರ್ತ್‌ ಸೌಂಡ್, ವೆಸ್ಟ್ ಇಂಡೀಸ್: ಭಾನುವಾರ ಭಾರತವು ನೀಡಿದ ಕಠಿಣ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಸೋಲಿನ ಹಾದಿಯಲ್ಲಿತ್ತು.

ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ 419 ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್, ಕೊನೆಯ ವರದಿ ಬಂದಾಗ 15.2 ಓವರ್‌ಗಳಲ್ಲಿ 37 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತ್ತು. ರಾಸ್ಟನ್‌ ಚೇಸ್‌ (6) ಹಾಗೂ ಕೇಮರ್‌ ರೋಚ್‌ (0) ಕ್ರೀಸ್‌ ಕಾಯ್ದುಕೊಂಡಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಶತಕದ ಬಲದಿಂದ (102; 242ಎಸೆತ,5ಬೌಂಡರಿ) ಭಾರತ ತಂಡವು 112.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 343 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಹನುಮವಿಹಾರಿ 93 ರನ್‌ ಗಳಿಸಿದರು.

ಗುರಿ ಬೆನ್ನತ್ತಿದ ಆತಿಥೇಯರಿಗೆ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ (7ಕ್ಕೆ5) ಮತ್ತು ಇಶಾಂತ್ ಶರ್ಮಾ (16ಕ್ಕೆ2) ಸಿಂಹಸ್ವಪ್ನರಾದರು.

ನಾರ್ತ್‌ಸೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 75 ರನ್ ಮುನ್ನಡೆ ಸಾಧಿಸಿತ್ತು.

ಪಂದ್ಯದಲ್ಲಿ ಇನ್ನು ಒಂದು ದಿನ ಬಾಕಿಯಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ:297, ವೆಸ್ಟ್ ಇಂಡೀಸ್ 222, ಎರಡನೇ ಇನಿಂಗ್ಸ್‌:112.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 343 (ವಿರಾಟ್ ಕೊಹ್ಲಿ 51, ಅಜಿಂಕ್ಯ ರಹಾನೆ 102, ಹನುಮವಿಹಾರಿ 93). ವೆಸ್ಟ್‌ ಇಂಡೀಸ್: 15.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 37 (ಇಶಾಂತ್ ಶರ್ಮಾ 16ಕ್ಕೆ2, ಜಸ್‌ಪ್ರೀತ್ ಬೂಮ್ರಾ 7ಕ್ಕೆ5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT