ಸೋಮವಾರ, ಜೂನ್ 1, 2020
27 °C
ಇನ್ಸ್ಟಾಗ್ರಾಮ್‌ನಲ್ಲಿ ಚಿತ್ರ ಹಂಚಿಕೊಂಡ ಕ್ರಿಕೆಟಿಗ

ರಿಷಭ್ ಪಂತ್ ಸಂತಸದ ಗುಟ್ಟು ಇಶಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಈಚೆಗೆ ತಮ್ಮ ಶತಕ ಮತ್ತು ಬೇಬಿಸಿಟ್ಟರ್ ಸ್ವಾರಸ್ಯದ ಮೂಲಕ ಕ್ರಿಕೆಟ್‌ಪ್ರಿಯರ ಮನಗಳನ್ನು ಗೆದ್ದಿದ್ದ ಭಾರತದ ಕ್ರಿಕೆಟ್ ರಿಷಭ್ ಪಂತ್ ಮನ ಕದ್ದ ಬೆಡಗಿ ಯಾರು ಗೊತ್ತೇ?

ದೆಹಲಿಯಲ್ಲಿ ಇಂಟಿರಿಯರ್ ಡಿಸೈನರ್‌ ಆಗಿರುವ ಇಶಾ ನೇಗಿಯೇ ಆ ಹುಡುಗಿ. ಸ್ವತಃ ರಿಷಭ್ ಅವರೇ ತಾವು ಇಶಾ ಜೊತೆಗೆ ಇರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

‘ನನ್ನ ಜೀವನದ ಸಂತಸ ಹೆಚ್ಚಲು ಕಾರಣವಾಗಿರುವ ನಿನ್ನ ಸಂತಸಕ್ಕಾಗಿ ಇದು’ ಎಂದು ರಿಷಭ್ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಶಾ, ‘ನನ್ನ ಆಪ್ತ ಸ್ನೇಹಿತ, ಹೃದಯದ ಗೆಳೆಯ ಮತ್ತು ನನ್ನ ಜೀವನದ ಪ್ರೀತಿ ನೀನು’ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ರಿಷಭ್ ಅವರದ್ದು, ದೆಹಲಿಯ ಆಟಗಾರ ರಿಷಭ್ ಅವರು, ಆಸ್ಟ್ರೇಲಿಯಾ ಸರಣಿಯಲ್ಲಿ ಏಳು ಇನಿಂಗ್ಸ್‌ಗಳಿಂದ 350 ರನ್‌ ಗಳಿಸಿದ್ದರು.

 
 
 
 

 
 
 
 
 
 
 
 
 

I just want to make you happy because you are the reason I am so happy ❤️

A post shared by Rishabh Pant (@rishabpant) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು