ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಗೆಲುವಿನತ್ತ ವಿಂಡೀಸ್‌

ಅಫ್ಗಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌
Last Updated 28 ನವೆಂಬರ್ 2019, 19:52 IST
ಅಕ್ಷರ ಗಾತ್ರ

ಲಖನೌ: ಶಮ್ರಾ ಬ್ರೂಕ್ಸ್‌ ಅವರ ಚೊಚ್ಚಲ ಟೆಸ್ಟ್‌ ಶತಕ (111) ಮತ್ತು ರಖೀಮ್‌ ಕಾರ್ನ್‌ವಾಲ್‌ ಅವರ ಅಮೋಘ ಬೌಲಿಂಗ್‌ನಿಂದಾಗಿ (ಪಂದ್ಯದಲ್ಲಿ ಒಟ್ಟು 10 ವಿಕೆಟ್‌) ವೆಸ್ಟ್ ಇಂಡೀಸ್‌ ತಂಡ, ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ಭಾರಿ ಗೆಲುವಿನತ್ತ ಕಾಲಿಟ್ಟಿದೆ.

ಅಫ್ಗಾನಿಸ್ತಾನದ 187 ರನ್‌ಗಳಿಗೆ ಉತ್ತರವಾಗಿ 2 ವಿಕೆಟ್‌ಗೆ 68 ರನ್‌ಗಳೊಡನೆ ಗುರುವಾರ ಎರಡನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್‌ 277 ರನ್ನಿಗೆ ಆಲೌಟ್‌ ಆಯಿತು. ಅಫ್ಗಾನಿಸ್ತಾನ ತಂಡಕ್ಕೆ ಇದ್ದುದರಲ್ಲಿ ನೆಮ್ಮದಿ ಮೂಡಿಸಿದ ವಿಷಯವೆಂದರೆ ಪದಾರ್ಪಣೆ ಮಾಡಿದ ವೇಗದ ಬೌಲರ್‌ ಅಮೀರ್‌ ಹಂಜಾ ಐದು ವಿಕೆಟ್‌ಗಳ ಗೊಂಚಲನ್ನು ಪಡೆದಿದ್ದು.

ಆದರೆ ಅಫ್ಗನ್ನರು ಎರಡನೇ ಇನಿಂಗ್ಸ್‌ನಲ್ಲಿ ಮತ್ತೆ ಕುಸಿದರು. ದಿನದ ಅಂತ್ಯಕ್ಕೆ ಅಫ್ಗಾನಿಸ್ತಾನ ಎರಡನೇ ಸರದಿಯಲ್ಲಿ 7 ವಿಕೆಟ್‌ಗೆ 109 ರನ್‌ ಗಳಿಸಿದ್ದು, ಕೇವಲ 19 ರನ್‌ಗಳ ಮುನ್ನಡೆ ಹೊಂದಿದೆ.

ಮೊದಲ ಇನಿಂಗ್ಸ್‌ನಲ್ಲಿ 75 ರನ್ನಿಗೆ 7 ವಿಕೆಟ್‌ ಕಬಳಿಸಿದ್ದ ಅಜಾನುಬಾಹು ಕಾರ್ನ್‌ವಾಲ್‌, ಎರಡನೇ ಇನಿಂಗ್ಸ್‌ನಲ್ಲಿ 75 ರನ್ನಿಗೆ ಮೂರು ವಿಕೆಟ್‌ ಪಡೆದರು.

ಸ್ಕೋರುಗಳು: ಅಫ್ಗಾನಿಸ್ತಾನ: 187 ಮತ್ತು 7 ವಿಕೆಟ್‌ಗೆ 109 (ಇಬ್ರಾಹಿಂ ಜರ್ದಾನ್‌ 23, ಜಾವೆದ್‌ ಅಹ್ಮದಿ 62, ರಖೀಮ್‌ ಕಾರ್ನ್‌ವಾಲ್‌ 41ಕ್ಕೆ3, ರಾಸ್ಟನ್‌ ಚೇಸ್‌ 10ಕ್ಕೆ3); ವೆಸ್ಟ್‌ ಇಂಡೀಸ್‌: 277 (ಜಾನ್‌ ಕ್ಯಾಂಪ್‌ಬೆಲ್‌ 55, ಶಮ್ರಾ ಬ್ರೂಕ್ಸ್‌ 111, ಶೇನ್‌ ಡೌರಿಚ್‌ 42; ಅಮೀರ್‌ ಹಂಝಾ 74ಕ್ಕೆ5, ರಷೀದ್‌ ಖಾನ್‌ 114ಕ್ಕೆ3, ಜಹೀರ್‌ ಖಾನ್‌ 53ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT