ಮಂಗಳವಾರ, ನವೆಂಬರ್ 19, 2019
28 °C

ವಿಂಡೀಸ್‌ಗೆ ಸಿಮನ್ಸ್‌ ಕೋಚ್‌

Published:
Updated:
Prajavani

ಸೇಂಟ್‌ ಜಾನ್‌ : ಹಿರಿಯ ಆಟಗಾರ ಫಿಲ್‌ ಸಿಮನ್ಸ್‌ ಅವರನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.

ಈ ವಿಷಯವನ್ನು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (ಸಿಡಬ್ಲ್ಯುಐ) ಸೋಮವಾರ ಪ್ರಕಟಿಸಿದೆ. ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.

2015ರಲ್ಲೂ ಸಿಮನ್ಸ್‌ ಅವರು ವಿಂಡೀಸ್‌ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡವು 2016ರ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಟ್ರೋಫಿ ಜಯಿಸಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅವರನ್ನು ಕೋಚ್‌ ಹುದ್ದೆಯಿಂದ ವಜಾ ಮಾಡಲಾಗಿತ್ತು.

‘ಸಿಡಬ್ಲ್ಯುಐ, ಸರಿಯಾದ ಸಮಯದಲ್ಲಿ ಸೂಕ್ತ ವ್ಯಕ್ತಿಯನ್ನು ಕೋಚ್‌ ಹುದ್ದೆಗೆ ನೇಮಿಸಿದೆ’ ಎಂದು ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್‌ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)