ಲಂಡನ್: ವಿಸ್ಡನ್ ಅಲ್ಮನಾಕ್–2026 ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಪ್ರಾಬಲ್ಯ ಸಾಧಿಸಿದ್ದಾರೆ. ಒಟ್ಟು 9 ಪ್ರಶಸ್ತಿಗಳ ಪೈಕಿ ಏಳನ್ನು ಟೀಂ ಇಂಡಿಯಾ ಆಟಗಾರರೇ ಪಡೆದುಕೊಂಡಿದ್ದಾರೆ.

ಟೀಂ ಇಂಡಿಯಾದ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ‘ವಿಸ್ಡನ್ ಅಲ್ಮನಾಕ್ ವರ್ಷದ ಟಿ20 ಆಟಗಾರ’ ಹಾಗೂ ದೀಪ್ತಿ ಶರ್ಮಾ ‘ವಿಸ್ಡನ್ ಅಲ್ಮನಾಕ್ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2025ರಲ್ಲಿ ಅಭಿಷೇಕ್ ಶರ್ಮಾ ಅವರು ಅವರು 21 ಪಂದ್ಯಗಳಲ್ಲಿ 193ರ ಸ್ಟ್ರೈಕ್ರೇಟ್ನಲ್ಲಿ 859 ರನ್ ಗಳಿಸಿದ್ದರು. ಅದರಲ್ಲಿ 5 ಅರ್ಧಶತಕಗಳು ಸಹಿತ ಸೇರಿತ್ತು.

ದೀಪ್ತಿ ಶರ್ಮಾ ಅವರು 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರು ಅರ್ಧಶತಕ ಸಹಿತ 215 ರನ್ ಬಾರಿಸಿದ್ದರು. 22 ವಿಕೆಟ್ ಕೂಡ ಪಡೆದಿದ್ದರು. ಅವರ ಆಲ್ರೌಂಡರ್ ಆಟದ ನೆರವಿನಿಂದ ಭಾರತವು ಚೊಚ್ಚಲ ವಿಶ್ವಕಪ್ ಗೆದ್ದಿತ್ತು.

ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜ ಅವರು ‘ವಿಸ್ಡನ್ 5 ಕ್ರಿಕೆಟರ್ಸ್ ಆಫ್ ದಿ ಈಯರ್’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇವರೆಲ್ಲಾ ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದರು.

ಈ ಪಟ್ಟಿಯಲ್ಲಿ ಭಾರತೀಯರನ್ನು ಹೊರತುಪಡಿಸಿ, ಕೇವಲ ಇಬ್ಬರು ಆಟಗಾರರು ಮಾತ್ರ ಇದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹಾಗೂ ಇಂಗ್ಲೆಂಡ್ ಬ್ಯಾಟರ್ ಹಸೀಬ್ ಹಮೀದ್ ಅವರಿಗೂ ಗೌರವ ಲಭಿಸಿದೆ. ಸ್ಟಾರ್ಕ್ ಅವರು ‘ಅತ್ಯುತ್ತಮ ಕ್ರಿಕೆಟಿಗ’ ಹಾಗೂ ಹಸೀಬ್ ಹಮೀದ್ ಅವರು ‘ವಿಸ್ಡನ್ 5 ಕ್ರಿಕೆಟರ್ಸ್ ಆಫ್ ದಿ ಈಯರ್’ ಪಟ್ಟಿಯಲ್ಲಿದ್ದಾರೆ.

1889ರಿಂದ ವಾರ್ಷಿಕವಾಗಿ ‘ವಿಸ್ಡನ್’ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.