ಕೊಹ್ಲಿ, ಸ್ಮೃತಿಗೆ ವಿಸ್ಡನ್ ಗೌರವ

ಶನಿವಾರ, ಏಪ್ರಿಲ್ 20, 2019
26 °C
ಅಫ್ಗಾನಿಸ್ತಾನದ ರಶೀದ್ ಖಾನ್ ವರ್ಷದ ಟ್ವೆಂಟಿ–20 ಕ್ರಿಕೆಟಿಗ; ವಿರಾಟ್‌ಗೆ ಸತತ ಮೂರನೇ ಪ್ರಶಸ್ತಿ

ಕೊಹ್ಲಿ, ಸ್ಮೃತಿಗೆ ವಿಸ್ಡನ್ ಗೌರವ

Published:
Updated:

ಲಂಡನ್‌: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಹಿಳಾ ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಅವರು ‘ವಿಸ್ಡನ್‌ ವರ್ಷದ ಕ್ರಿಕೆಟಿಗರು’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಐಸಿಸಿಯ ವರ್ಷದ ಪ್ರಶಸ್ತಿಗಳನ್ನು ಕೂಡ ಇವರಿಬ್ಬರು ಬಗಲಿಗೆ ಹಾಕಿಕೊಂಡಿದ್ದರು.

ಕೊಹ್ಲಿ, ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಸತತ ಮೂರನೇ ವರ್ಷ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವರ್ಷ ಅವರು ಮೂರೂ ಮಾದರಿಗಳಲ್ಲಿ ಒಟ್ಟು 2735 ರನ್‌ ಕಲೆ ಹಾಕಿದ್ದರು. ಕೊಹ್ಲಿ, ಮೂರು ಬಾರಿ ಪ್ರಶಸ್ತಿ ಗೆದ್ದ ಮೂರನೇ ಆಟಗಾರ ಆಗಿದ್ದಾರೆ. ಡಾನ್‌ ಬ್ರಾಡ್‌ಮನ್‌ (10) ಮತ್ತು ಜಾಕ್‌ ಹಾಬ್ಸ್‌ (8) ಈ ಸಾಧನೆ ಮಾಡಿದ ಇತರ ಆಟಗಾರರು. ಇಂಗ್ಲೆಂಡ್‌ನ ಟಾಮಿ ಬ್ಯೂಮೌಂಟ್‌, ಜೋಸ್ ಬಟ್ಲರ್‌, ಸ್ಯಾಮ್ ಕರನ್‌ ಮತ್ತು ರಾರಿ ಬರ್ನ್ಸ್‌ ಕೂಡ ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.

ಮಂದಾನ ಕಳೆದ ವರ್ಷ ಏಕದಿನ ಕ್ರಿಕೆಟ್‌ನಲ್ಲಿ 669 ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ 662 ರನ್ ಕಲೆ ಹಾಕಿದ್ದರು. ಮಹಿಳೆಯರ ಸೂಪರ್ ಲೀಗ್‌ನಲ್ಲಿ 174.68ರ ಸ್ಟ್ರೈಕ್‌ರೇಟ್‌ನಲ್ಲಿ 421 ರನ್‌ ಗಳಿಸಿ ಗಮನ ಸೆಳೆದಿದ್ದರು.

ರಶೀದ್‌ ಖಾನ್‌ಗೆ ಗೌರವ: ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ ವರ್ಷದ ಟ್ವೆಂಟಿ–20 ಕ್ರಿಕೆಟಿಗ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಸತತ ಎರಡನೇ ಬಾರಿ ಅವರು ಈ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಅಫ್ಗಾನಿಸ್ತಾನದ ಪರವಾಗಿ 22 ವಿಕೆಟ್ ಕಬಳಿಸಿರುವ ರಶೀದ್ ಖಾನ್‌ ಐಪಿಎಲ್‌ನಲ್ಲಿ 21 ವಿಎಕಟ್‌ಗಳ ಸಾಧನೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !