ಕ್ರಿಕೆಟ್‌: ರೆಡ್‌ಗೆ ಗ್ರೀನ್‌ ಸವಾಲು

7

ಕ್ರಿಕೆಟ್‌: ರೆಡ್‌ಗೆ ಗ್ರೀನ್‌ ಸವಾಲು

Published:
Updated:
Deccan Herald

ಬೆಂಗಳೂರು: ಇಂಡಿಯಾ ರೆಡ್‌ ಮತ್ತು ಇಂಡಿಯಾ ಗ್ರೀನ್‌ ತಂಡಗಳು ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ.

ಆಲೂರಿನ ಮೂರನೆ ಮೈದಾನದಲ್ಲಿ ಗುರುವಾರ ನಡೆಯುವ ಈ ಹಣಾಹಣಿಯಲ್ಲಿ ಯಾವ ತಂಡ ಗೆಲುವಿನ ತೋರಣ ಕಟ್ಟಲಿದೆ ಎಂಬ ಕುತೂಹಲ ಈಗ ಗರಿಗೆದರಿದೆ.

ಟೂರ್ನಿಯಲ್ಲಿ ಉಭಯ ತಂಡಗಳು ಈಗಾಗಲೇ ತಲಾ ಒಂದು ಪಂದ್ಯ ಆಡಿ ಗೆದ್ದಿವೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಸಾರಥ್ಯದ ಗ್ರೀನ್‌ ತಂಡ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿದೆ. ಜೆಮಿಮಾ ರಾಡ್ರಿಗಸ್‌, ಪ್ರಿಯಾ ಪೂನಿಯಾ, ಮೋನಿಕಾ ದಾಸ್‌, ವೇದಾ ಮತ್ತು ಸುಷ್ಮಾ ವರ್ಮಾ ಅವರು ರೆಡ್‌ ತಂಡದ ಬೌಲರ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ನಲ್ಲಿ ಜೂಲನ್‌ ಗೋಸ್ವಾಮಿ, ರಾಜೇಶ್ವರಿ ಗಾಯಕವಾಡ, ಅರುಂಧತಿ ರೆಡ್ಡಿ, ಕೃತಿಕಾ ಚೌಧರಿ, ಸುಶ್ರೀ ಪ್ರಧಾನ್‌ ಮತ್ತು ಮೋನಿಕಾ ದಾಸ್‌ ಅವರ ಬಲ ಈ ತಂಡಕ್ಕಿದೆ.

ದೀಪ್ತಿ ಶರ್ಮಾ ಸಾರಥ್ಯದ ರೆಡ್‌ ಕೂಡಾ ಗೆಲುವಿನ ಕನಸು ಕಾಣುತ್ತಿದೆ. ದೀಪ್ತಿ, ಶಿಖಾ ಪಾಂಡೆ, ಮೋನಾ ಮೆಷ್ರಮ್‌, ತನುಶ್ರೀ ಸರ್ಕಾರ್‌ ಮತ್ತು ನುಜತ್‌ ಪರ್ವೀನ್‌ ಅವರು ಮೋಡಿ ಮಾಡಲು ಕಾಯುತ್ತಿದ್ದಾರೆ.

ಏಕ್ತಾ ಬಿಷ್ಠ್‌ ಮತ್ತು ಶಾಂತಿ ಕುಮಾರಿ ಅವರ ಮೇಲೂ ಭರವಸೆ ಇಡಬಹುದಾಗಿದೆ.

 ಆರಂಭ: ಬೆಳಿಗ್ಗೆ 10.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !