ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯ ಹೊಂದಾಣಿಕೆ: ದೂರು ನೀಡಿದ ಭಾರತ ತಂಡದ ಕ್ರಿಕೆಟ್‌ ಆಟಗಾರ್ತಿ

Last Updated 16 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ವರ್ಷದ ಆರಂಭದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯೊಬ್ಬರನ್ನು ‘‍ಪಂದ್ಯ ಹೊಂದಾಣಿಕೆ’ ಮಾಡುವಂತೆ ಇಬ್ಬರು ಸಂಪರ್ಕಿಸಿದ್ದರುಎಂಬ ಮಾಹಿತಿ ಮೇರೆಗೆ ಬಿಸಿಸಿಐ ಭ್ರಷ್ಟಾಚಾರ ತಡೆ ಘಟಕವು (ಎಸಿಯು) ಇಬ್ಬರ ವಿರುದ್ಧ ಸೋಮವಾರ ಎಫ್ಐಆರ್‌ ದಾಖಲಿಸಿದೆ.

ಈ ವರ್ಷದ ಫೆಬ್ರುವರಿಯಲ್ಲಿ, ಇಂಗ್ಲೆಂಡ್‌ ವಿರುದ್ಧ ಏಕದಿನ ಪಂದ್ಯಗಳ ಸರಣಿಗೆ ಮೊದಲು ಪ್ರಕರಣ ನಡೆದಿದೆ ಎನ್ನಲಾಗಿದ್ದು, ಸಂಬಂಧಪಟ್ಟ ಆಟಗಾರ್ತಿ ಮಂಡಳಿಯ ಎಸಿಯುಗೆ ದೂರು ನೀಡಿದ್ದಾರೆ. ಈ ಬೆಳವಣಿಗೆ ನಡೆದಿರುವುದನ್ನು ಎಸಿಯು ಮುಖ್ಯಸ್ಥ ಅಜಿತ್‌ ಸಿಂಗ್‌ ಶೇಖಾವತ್‌ ಪಿಟಿಐಗೆ ಖಚಿತಪಡಿಸಿದ್ದಾರೆ.

‘ಆಕೆ ಭಾರತ ತಂಡದ ಆಟಗಾರ್ತಿ ಆಗಿರುವುದರಿಂದ ಐಸಿಸಿ ಈ ಬಗ್ಗೆ ವಿಚಾರಣೆ ನಡೆಸಿದೆ. ಆಟಗಾರ್ತಿಯನ್ನು ಸಂಪರ್ಕಿಸಿದ ವ್ಯಕ್ತಿಗೆ ಐಸಿಸಿ ಎಚ್ಚರಿಕೆ ನೀಡಿದ್ದು, ನಮಗೆ ಮಾಹಿತಿ ನೀಡಿದೆ. ಆಟಗಾರ್ತಿಯು ಪ್ರಕರಣವನ್ನು ಗಮನಕ್ಕೆ ತಂದಿರುವುದು ಸರಿಯಾದ ಕ್ರಮ ಎಂದಿದೆ’ ಎಂದು ಶೇಖಾವತ್‌ ಹೇಳಿದ್ದಾರೆ.

ಭ್ರಷ್ಟಾಚಾರ ತಡೆ ಘಟಕವು, ಆಟಗಾರ್ತಿಯರನ್ನು ಸಂಪರ್ಕಿಸಿದ ಆರೋಪದ ಮೇಲೆ ‌ರಾಕೇಶ್‌ ಬಾಫ್ನಾ ಮತ್ತು ಜಿತೇಂದ್ರ ಕೊಠಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT