ಬುಧವಾರ, ಅಕ್ಟೋಬರ್ 16, 2019
22 °C

ಮಹಿಳಾ ಕ್ರಿಕೆಟ್: ರಾಧಾಗೆ 3 ವಿಕೆಟ್‌

Published:
Updated:

ಸೂರತ್‌: ರಾಧಾ ಯಾದವ್‌ (23ಕ್ಕೆ3) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (ಔಟಾಗದೆ 34; 32ಎ, 4ಬೌಂ) ಅವರ ಉತ್ತಮ ಆಟದಿಂದಾಗಿ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಎದುರಿನ ಐದನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ 6 ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 98 (ಲಿಜೆಲ್ಲೆ ಲೀ 16, ಲೌರಾ ವೊಲ್ವಾರ್ಡ್ತ್‌ 17, ಲಾರಾ ಗೂಡಲ್‌ 15; ದೀಪ್ತಿ ಶರ್ಮಾ 19ಕ್ಕೆ2, ಶಿಖಾ ಪಾಂಡೆ 15ಕ್ಕೆ1, ರಾಧಾ ಯಾದವ್‌ 23ಕ್ಕೆ3).

ಭಾರತ: 17.1 ಓವರ್‌ಗಳಲ್ಲಿ 5 ವಿಕೆಟ್‌ಗೆ 99 (ಶಫಾಲಿ ವರ್ಮಾ 14, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 34, ದೀಪ್ತಿ ಶರ್ಮಾ 16; ಶಬನಿಮ್‌ ಇಸ್ಮಾಯಿಲ್‌ 19‌ಕ್ಕೆ2). ಫಲಿತಾಂಶ: ಭಾರತಕ್ಕೆ 5 ವಿಕೆಟ್‌ ಗೆಲುವು.

Post Comments (+)