ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್: ದಕ್ಷಿಣ ಆಫ್ರಿಕಾ ಅಜೇಯ ಓಟಕ್ಕಿಲ್ಲ ತಡೆ

ಆತಿಥೇಯ ಕಿವೀಸ್‌ಗೆ ನಿರಾಶೆ
Last Updated 17 ಮಾರ್ಚ್ 2022, 22:22 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಅಜೇಯ ಓಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡವು ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಜಯಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಲಾರಾ ವಾಲ್ವವರ್ಡಿಟ್ (67; 94ಎ, 4X6) ಮತ್ತು ಸುನಿ ಲಯುಸ್ (51; 73ಎ, 4X4) ದಕ್ಷಿಣ ಆಫ್ರಿಕಾ ತಂಡವು 2 ವಿಕೆಟ್‌ಗಳಿಂದ ಕಿವೀಸ್ ಬಳಗವನ್ನು ಮಣಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಶಬ್ನಿಮ್ ಇಸ್ಮಾಯಿಲ್ (27ಕ್ಕೆ3) ಮತ್ತು ಅಯಾಬೊಂಗಾ ಖಾಕಾ (31ಕ್ಕೆ3) ಅವರ ಬೌಲಿಂಗ್ ಮುಂದೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. 47.5 ಓವರ್‌ಗಳಲ್ಲಿ 228 ರನ್ ಗಳಿಸಿತು. ಕಿವೀಸ್ ತಂಡದ ನಾಯಕ ಸೋಫಿ ಡಿವೈನ್ (93;101ಎ, 4X12, 6X1) ಮತ್ತು ಅಮೆಲಿಯಾ ಕೆರ್ (42; 58ಎ) ಅವರಿಬ್ಬರ ಬ್ಯಾಟಿಂಗ್‌ ಗಮನ ಸೆಳೆಯಿತು. ಅದಕ್ಕುತ್ತರವಾಗಿ 49.3 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 229 ರನ್‌ಗಳನ್ನು ಗಳಿಸಿತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟುಬಿತ್ತು. ಆರಂಭಿಕ ಬ್ಯಾಟರ್ ಲಿಝೆಲ್ ಲೀ ರನ್‌ಔಟ್ ಆದರು. ಆದರೆ, ಲಾರಾ ಮತ್ತು ನಾಯಕಿ ಸುನಿ ಅವರ ಜೊತೆಯಾಟದಿಂದ ಇನಿಂಗ್ಸ್‌ಗೆ ಚೇತರಿಕೆ ಲಭಿಸಿತು. ಆದರೆ ಇವರಿಬ್ಬರೂ ಔಟಾದ ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಬೇಗನೆ ಔಟಾಗಿದ್ದರಿಂದ ಆತಂಕ ಮೂಡಿತ್ತು.

ಆದರೆ ಮರಿಝಾನ್ ಕಾಪ್ (ಔಟಾಗದೆ 34; 35ಎ) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಟೂರ್ನಿಯಲ್ಲಿ ತಂಡವು ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು
ನ್ಯೂಜಿಲೆಂಡ್:
47.5 ಓವರ್‌ಗಳಲ್ಲಿ 238 (ಸೋಫಿ ಡಿವೈನ್ 93, ಅಮೆಲಿಯಾ ಕೆರ್ 42, ಶಬ್ನಿಮ್ ಇಸ್ಮಾಯಿಲ್ 27ಕ್ಕೆ3, ಅಯಬೊಂಗಾ ಖಾಕಾ 31ಕ್ಕೆ3)
ದಕ್ಷಿಣ ಆಫ್ರಿಕಾ: 49.3 ಓವರ್‌ಗಳಲ್ಲಿ 8ಕ್ಕೆ229 (ಲಾರಾ ವಾಲ್ವಾರಟ್ 67, ಸುನಿ ಲುಯಸ್ 51, ಅಮೆಲಿಯಾ ಕೆರ್ 50ಕ್ಕೆ3)
ಫಲಿತಾಂಶ: ದಕ್ಷಿಣ ಆಫ್ರಿಕಾಗೆ 2 ವಿಕೆಟ್‌ಗಳ ಜಯ
ಶುಕ್ರವಾರದ ಪಂದ್ಯ: ಬಾಂಗ್ಲಾದೇಶ–ವೆಸ್ಟ್ ಇಂಡೀಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT