ಗುರುವಾರ , ಸೆಪ್ಟೆಂಬರ್ 19, 2019
26 °C

ಮಹಿಳಾ ಕೆಪಿಎಲ್: ಬೆಳಗಾವಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಅದಿತಿ ರಾಜೇಶ್ (30 ಮತ್ತು 24ಕ್ಕೆ2) ಅವರ ಆಲ್‌ರೌಂಡ್ ಆಟದಿಂದಾಗಿ ಬೆಳಗಾವಿ ಪ್ಯಾಂಥರ್ಸ್ ತಂಡವು ಮಹಿಳಾ ವಿಭಾಗದ  ಕರ್ನಾಟಕ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದಿತು.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್  ಮಾಡಿದ ಬಳ್ಳಾರಿ ಟಸ್ಕರ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 102 ರನ್ ಗಳಿಸಿತು. ತಂಡದ ಅನುಭವಿ ಬ್ಯಾಟ್ಸ್‌ವುಮನ್ ವಿ.ಅರ್. ವನಿತಾ (21 ರನ್) ಮತ್ತು ಪುಷ್ಪಾ (25 ರನ್) ಅವರು ಉತ್ತಮವಾಗಿ ಆಡಿದರು. ಆದರೆ, ಅದಿತಿ ಅವರ ಉತ್ತಮ ಬೌಲಿಂಗ್ ಮುಂದೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಗುರಿ ಬೆನ್ನತ್ತಿದ ಬೆಳಗಾವಿ ತಂಡವು 20 ಓವರ್‌ಗಳಲ್ಲಿ  9 ವಿಕೆಟ್‌ಗಳಿಗೆ 103 ರನ್ ಗಳಿಸಿ ಗೆದ್ದಿತು.  ತಂಡವು ಸೋಲಿನ ಹಾದಿಯಲ್ಲಿದ್ದಾಗ ಮಿಂಚಿದ ಅದಿತಿ ಉತ್ತಮ ಬ್ಯಾಟಿಂಗ್ ಮಾಡಿದರು. ತಂಡದ ಜಯಕ್ಕೆ ಮಹತ್ವದ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು:

ಬಳ್ಳಾರಿ ಟಸ್ಕರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 102 (ವಿ.ಆರ್. ವನಿತಾ 21, ಕೆ. ಪುಷ್ಪಾ 25, ದೇವಸ್ಮಿತಾ ದತ್ತಾ ಔಟಾಗದೆ 20, ಅದಿತಿ ರಾಜೇಶ್ 24ಕ್ಕೆ2)

ಬೆಳಗಾವಿ ಪ್ಯಾಂಥರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 103 (ಅದಿತಿ ರಾಜೇಶ್ 30, ಚೇತನಾ 19ಕ್ಕೆ3) ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ 1 ವಿಕೆಟ್ ಜಯ.

Post Comments (+)