ಮಂಗಳವಾರ, ಜೂನ್ 28, 2022
21 °C

ಮಹಿಳೆಯರ ಟಿ20 ಚಾಲೆಂಜ್: ಸೂಪರ್‌ನೋವಾಸ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಪೂಜಾ ವಸ್ತ್ರಕರ್ ಅವರ ಪ್ರಭಾವಿ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್ ತಂಡ ಕುಸಿಯಿತು. ಸೂಪರ್‌ನೋವಾಸ್ ತಂಡ ಭರ್ಜರಿ ಜಯ ಗಳಿಸಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮಹಿಳೆಯರ ಟಿ20 ಚಾಲೆಂಜರ್ಸ್ ಟೂರ್ನಿಯ ಪಂದ್ಯದಲ್ಲಿ ಸೂಪರ್‌ನೋವಾಸ್ 49 ರನ್‌ಗಳಿಂದ ಟ್ರೇಲ್‌ಬ್ಲೇಜರ್ಸ್ ತಂಡವನ್ನು ಮಣಿಸಿತು.

164 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಟ್ರೇಲ್ ಬ್ಲೇಜರ್ಸ್ 9ಕ್ಕೆ 114 ರನ್ ಗಳಿಸಿತು. ಅಗ್ರ ಕ್ರಮಾಂಕದ ಮೂವರನ್ನು ಬಿಟ್ಟರೆ ಉಳಿದ ಯಾರಿಗೂ ಮಿಂಚಲು ಸಾಧ್ಯವಾಗಲಿಲ್ಲ.

ಟಾಸ್ ಗೆದ್ದ ಸೂಪರ್‌ನೋವಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಿಯಾ ಪೂನಿಯಾ ಮತ್ತು ಡಾಟಿನ್ ಜೋಡಿ ಹಾಕಿದ  ಅಡಿಪಾಯದ ಮೇಲೆ ತಂಡ ಉತ್ತಮ ಮೊತ್ತ ದಾಖಲಿಸಿತು.

ಟ್ರೇಲ್‌ಬ್ಲೇಜರ್ಸ್ ತಂಡದ ಬೌಲರ್ ಹೆಯಲಿ ಮ್ಯಾಥ್ಯೂಸ್ (29ಕ್ಕೆ3) ಸೂಪರ್‌ನೋವಾಸ್‌ ತಂಡಕ್ಕೆ ಸ್ವಲ್ಪ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಆರಂಭಿಕ ಜೋಡಿ ಪ್ರಿಯಾ ಮತ್ತು ಡಾಟಿನ್ ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು. ಕೇವಲ ಐದು ಓವರ್‌ಗಳಲ್ಲಿ ಈ ಮೊತ್ತ ಕಲೆಹಾಕಿದರು. ಡಾಟಿನ್ ರನೌಟ್ ಆಗಿದ್ದರಿಂದ ಜೊತೆ ಯಾಟ ಮುರಿಯಿತು.

ಎಂಟನೇ ಓವರ್‌ ನಲ್ಲಿ ಹೆಯಲಿ ಬೌಲಿಂಗ್‌ನಲ್ಲಿ ಪ್ರಿಯಾ ಕ್ಲೀನ್‌ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿನದ ಹರ್ಲಿನ್ ಡಿಯೊಲ್ (35; 19ಎ) ಮತ್ತು ಹರ್ಮನ್‌ಪ್ರೀತ್ ಕೌರ್ (37; 29) ಇನಿಂಗ್ಸ್‌ಗೆ ಬಲ ತುಂಬಿದರು. 12ನೇ ಓವರ್‌ನಲ್ಲಿ ಸಲ್ಮಾ ಖಾತೂನ್ ಜೊತೆಯಾಟ ಮುರಿದರು. ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 

ಪೂಜಾ ವಸ್ತ್ರಕರ್ ಮತ್ತು ಸೂನ್‌ ಲೂಜ್‌ ಮಾತ್ರ ಎರಡಂಕಿ ಮುಟ್ಟಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು