ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್‌: ಎರಡನೇ ಪಂದ್ಯದಲ್ಲೂ ಭಾರತ ಜಯಭೇರಿ

7
ಮಿಥಾಲಿ ರಾಜ್ ಅಮೋಘ ಅರ್ಧ ಶತಕ

ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್‌: ಎರಡನೇ ಪಂದ್ಯದಲ್ಲೂ ಭಾರತ ಜಯಭೇರಿ

Published:
Updated:
Deccan Herald

ಪ್ರಾವಿಡೆನ್ಸ್, ಗಯಾನ: ಮಿಥಾಲಿ ರಾಜ್‌ (56; 47 ಎಸೆತ, 7 ಬೌಂಡರಿ) ಮತ್ತು ಸ್ಮೃತಿ ಮಂದಾನ ಅವರ ಉತ್ತಮ ಜೊತೆಯಾಟದ ನೆರವಿ ನಿಂದ ಭಾರತ ತಂಡ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಭಾನುವಾರ ರಾತ್ರಿ ನಡೆದ ಪಂದ್ಯ ದಲ್ಲಿ ಹರ್ಮನ್‌ಪ್ರೀತ್ ಕೌರ್‌ ಬಳಗ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.

ಬಿಸ್ಮಾ–ನಿದಾ ಜೊತೆಯಾಟದ ಸೊಗಸು: ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲಿ ಆಘಾತಕ್ಕೆ ಒಳಗಾಯಿತು.

ಆಯೆಷಾ ಜಫರ್‌ ಶೂನ್ಯಕ್ಕೆ ಔಟಾ ದರೆ, ನಾಯಕಿ ಜವೇರಿಯಾ ಖಾನ್ ಮತ್ತು ಮೂರನೇ ಕ್ರಮಾಂಕದ ಉಮೈಮಾ ಸೊಹೇಲ್‌ ರನ್ ಔಟ್‌ ಬಲೆಗೆ ಬಿದ್ದರು. 30 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಬಿಸ್ಮಾ ಮರೂಫ್ (54; 49 ಎಸೆತ, 4 ಬೌಂಡರಿ) ಮತ್ತು ನಿದಾ ದಾರ್‌ (52; 35 ಎಸೆತ, 2 ಸಿಕ್ಸರ್‌, 5 ಬೌಂಡರಿ) ಅಮೋಘ ಆಟವಾಡಿ ನಾಲ್ಕನೇ ವಿಕೆಟ್‌ಗೆ 94 ರನ್‌ಗಳನ್ನು ಸೇರಿಸಿದರು.

ತಾಳ್ಮೆಯಿಂದ ಬ್ಯಾಟ್‌ ಬೀಸಿದ ಬಿಸ್ಮಾ ಬೌಂಡರಿಗಳ ಮೂಲಕ ಮುದ ನೀಡಿದರು. ನಿದಾ, ಸ್ಫೋಟಕ ಬ್ಯಾಟಿಂಗ್ ಮಾಡಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 7ಕ್ಕೆ 134 (ಜವೇರಿಯಾ ಖಾನ್‌ 17, ಬಿಸ್ಮಾ ಮರೂಫ್‌ 54, ನಿದಾ ದಾರ್‌ 52; ಅರುಂಧತಿ ರೆಡ್ಡಿ 24ಕ್ಕೆ1, ದಯಾಳನ್‌ ಹೇಮಲತಾ 34ಕ್ಕೆ2, ಪೂನಂ ಯಾದವ್‌ 22ಕ್ಕೆ2); ಭಾರತ: 19 ಓವರ್‌ಗಳಲ್ಲಿ 3ಕ್ಕೆ 137 (ಮಿಥಾಲಿ ರಾಜ್‌ 56, ಸ್ಮೃತಿ ಮಂದಾನ 26, ಜೆಮಿಮಾ ರಾಡ್ರಿಗಸ್ 16, ಹರ್ಮನ್‌ಪ್ರೀತ್‌ ಕೌರ್‌ 14;ನಿದಾ ದಾರ್‌ 17ಕ್ಕೆ1, ಬಿಸ್ಮಾ ಮರೂಫ್‌ 21ಕ್ಕೆ1). ಫಲಿತಾಂಶ: ಭಾರತಕ್ಕೆ ಏಳು ವಿಕೆಟ್‌ಗಳ ಜಯ. ಭಾರತದ ಮುಂದಿನ ಪಂದ್ಯ 15ರಂದು, ಐರ್ಲೆಂಡ್ ವಿರುದ್ಧ.

ಲಂಕಾ–ಇಂಗ್ಲೆಂಡ್ ಪಂದ್ಯ ರದ್ದು

ಶನಿವಾರ ನಡೆಯಬೇಕಾಗಿದ್ದ ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನು ಮಳೆಯ ಕಾರಣ ರದ್ದುಪಡಿಸಲಾಯಿತು. ಗ್ರಾಸ್ ಐಲೆಟ್‌ನ ಸೇಂಟ್ ಲೂಸಿಯಾದಲ್ಲಿ ಪಂದ್ಯ ಆಯೋಜನೆಯಾಗಿತ್ತು. ಆದರೆ ಧಾರಾಕಾರ ಮಳೆಯಿಂದಾಗಿ ಆಟಗಾರ್ತಿಯರಿಗೆ ಅಂಗಣಕ್ಕೆ ಇಳಿಯಲಾಗಲಿಲ್ಲ.

ಇಂಗ್ಲೆಂಡ್‌ನ ಮುಂದಿನ ಪಂದ್ಯ ಬಾಂಗ್ಲಾದೇಶ ವಿರುದ್ಧ ನವೆಂಬರ್‌ 13ರಂದು ನಡೆಯಲಿದೆ. ಅದೇ ದಿನ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಇಲ್ಲಿ ಇನ್ನೂ ಧಾರಾಕಾರ ಮಳೆ ಸುರಿಯುವ ಸಾಧ್ಯತೆಗಳು ಇರುವುದರಿಂದ ಪಂದ್ಯಗಳನ್ನು ಆ್ಯಂಟಿಗಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !