ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್ ಅಂಗಳದಲ್ಲಿ ಮಹಿಳಾ ಅಂಪೈರ್‌ಗಳು

Last Updated 10 ಜನವರಿ 2023, 15:39 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮಹಿಳಾ ಅಂಪೈರ್‌ಗಳು ಕಾರ್ಯಾರಂಭ ಮಾಡಿದರು.

ವೃಂದಾ ರಾಠಿ, ಜನನಿ ನಾರಾಯಣ ಮತ್ತು ಗಾಯತ್ರಿ ವೇಣುಗೋಪಾಲನ್ ಅವರು ಇತಿಹಾಸ ಬರೆದರು.

ಜೆಮ್ಶೆಡ್‌ಪುರದಲ್ಲಿ ನಡೆಯುತ್ತಿರುವ ಜಾರ್ಖಂಡ್ ಮತ್ತು ಛತ್ತೀಸಗಢ ನಡುವಣ ಪಂದ್ಯದಲ್ಲಿ ಗಾಯತ್ರಿ ವೇಣುಗೋಪಾಲ್ ಕಾರ್ಯನಿರ್ವಹಿಸುತ್ತಿದ್ಧಾರೆ.

ಸೂರತ್‌ನಲ್ಲಿ ನಡೆಯುತ್ತಿರುವ ರೈಲ್ವೆಸ್ ಮತ್ತು ತ್ರಿಪುರ ನಡುವಣ ಪಂದ್ಯದಲ್ಲಿ ಜನನಿ ನಾರಾಯಣನ್, ಪೊರ್ವೆರಿಯಂನಲ್ಲಿ ಗೋವಾ ಹಾಗೂ ಪುದುಚೇರಿ ನಡುವಣ ಪಂದ್ಯದಲ್ಲಿ ವೃಂದಾ ರಾಠಿ ಅಂಪೈರಿಂಗ್ ಮಾಡುತ್ತಿದ್ದಾರೆ.

ಚೆನ್ನೈನ ಜನನಿ ಹಾಗೂ ಮುಂಬೈನ ವೃಂದಾ ಅವರು 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಡೆವಲಪ್‌ಮೆಂಟ್‌ ಅಂಪೈರ್ ಪ್ಯಾನೆಲ್‌ಗೆ ಸೇರ್ಪಡೆಯಾಗಿದ್ದರು. ದೆಹಲಿಯ ಗಾಯತ್ರಿ ಅವರು ಬಿಸಿಸಿಐ ಪ್ಯಾನೆಲ್‌ನಲ್ಲಿದ್ದಾರೆ.

32 ವರ್ಷದ ವೃಂದಾ ಮುಂಬೈನಲ್ಲಿ ಕ್ರಿಕೆಟ್ ಆಡುತ್ತ ಬೆಳೆದವರು. ಅಲ್ಲಿಯ ಪಂದ್ಯಗಳಲ್ಲಿಯೇ ಅಂಪೈರಿಂಗ್ ಆರಂಭಿಸಿದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 36 ವರ್ಷದ ಜನನಿ ಅವರು ಅಂಪೈರಿಂಗ್‌ಗಾಗಿ ಉತ್ತಮ ಸಂಬಳ ಪಡೆಯುತ್ತಿದ್ದ ಉದ್ಯೋಗವನ್ನು ಬಿಟ್ಟಿದ್ದಾರೆ. 43 ವರ್ಷದ ಗಾಯತ್ರಿ ಅವರು 2019ರಲ್ಲಿ ಬಿಸಿಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಪೈರಿಂಗ್‌ ಮಾಡುತ್ತಿದ್ದಾರೆ.

‘ಅಂಪೈರಿಂಗ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವ ಗುರಿ ಇದೆ. ಅದರಲ್ಲೂ ಪುರುಷರ ಕ್ರಿಕೆಟ್‌ನಲ್ಲಿಯೂ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸುವ ಅವಕಾಶಗಳನ್ನು ಹೆಚ್ಚಿಸುವುದು ನಮ್ಮ ಉದ್ದೇಶ’ ಎಂದೂ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT