ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌: ಇಂಡಿಯಾ ರೆಡ್‌ಗೆ ಜಯ

7
ದೀಪ್ತಿ ಆಲ್‌ರೌಂಡ್ ಆಟ

ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌: ಇಂಡಿಯಾ ರೆಡ್‌ಗೆ ಜಯ

Published:
Updated:
Deccan Herald

ಬೆಂಗಳೂರು: ನಾಯಕಿ ದೀಪ್ತಿ ಶರ್ಮಾ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಇಂಡಿಯಾ ರೆಡ್‌ ತಂಡ ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಮೂರನೆ ಮೈದಾನದಲ್ಲಿ ಮಂಗಳವಾರ ನಡೆದ ಹಣಾಹಣಿಯಲ್ಲಿ ರೆಡ್‌ ತಂಡ ವಿ.ಜಯದೇವನ್‌ (ವಿಜೆಡಿ) ನಿಯಮದ ಅನ್ವಯ 7 ವಿಕೆಟ್‌ಗಳಿಂದ ಇಂಡಿಯಾ ಬ್ಲೂ ತಂಡವನ್ನು ಸೋಲಿಸಿದೆ.

ಮೊದಲು ಬ್ಯಾಟ್‌ ಮಾಡಿದ ಬ್ಲೂ  20 ಓವರ್‌ಗಳಲ್ಲಿ 8 ವಿಕೆಟ್‌ಗೆ 100ರನ್‌ ಕಲೆಹಾಕಿತು. ನಾಯಕಿ ಮಿಥಾಲಿ ರಾಜ್‌ (51; 51ಎ, 7ಬೌಂ, 1ಸಿ) ಅರ್ಧಶತಕ ಸಿಡಿಸಿದರು.

ಸಾಧಾರಣ ಗುರಿ ಬೆನ್ನಟ್ಟಿದ ರೆಡ್‌ ತಂಡ 16.3 ಓವರ್‌ಗಳಲ್ಲಿ 3 ವಿಕೆಟ್‌ಗೆ 79ರನ್ ಗಳಿಸಿದ್ದ ವೇಳೆ ಧಾರಾಕಾರ ಮಳೆ ಸುರಿಯಿತು. ಮಳೆ ನಿಲ್ಲದ ಕಾರಣ ವಿಜೆಡಿ ನಿಯಮದ ಅನುಸಾರ ಉತ್ತಮ ರನ್‌ ಸರಾಸರಿ ಹೊಂದಿದ್ದ ರೆಡ್‌ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ರೆಡ್‌ ತಂಡದ ನಾಯಕಿ ದೀಪ್ತಿ, ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆದರು. 44 ಎಸೆತಗಳಲ್ಲಿ 6 ಬೌಂಡರಿ ಸಹಿತ 45ರನ್‌ ಬಾರಿಸಿ ಅಜೇಯರಾಗುಳಿದ ಅವರು ಬೌಲಿಂಗ್‌ನಲ್ಲೂ ಮಿಂಚಿದರು. 4 ಓವರ್‌ ಹಾಕಿ 2 ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ಬ್ಲೂ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 100 (ಮಿಥಾಲಿ ರಾಜ್‌ 51, ವೆಲ್ಲಸ್ವಾಮಿ ವನಿತಾ 12, ದಯಾಳನ್‌ ಹೇಮಲತಾ 11, ಅನುಜಾ ಪಾಟೀಲ್‌ 8, ಮಾನಸಿ ಜೋಶಿ 5, ನೇಹಾ ತನ್ವರ್‌ 8; ಶಾಂತಿ ಕುಮಾರಿ 4ಕ್ಕೆ1, ಟಿ.‍ಪಿ.ಕನ್ವರ್‌ 16ಕ್ಕೆ2, ದೀಪ್ತಿ ಶರ್ಮಾ 15ಕ್ಕೆ2).

ಇಂಡಿಯಾ ರೆಡ್‌: 16.3 ಓವರ್‌ಗಳಲ್ಲಿ 3 ವಿಕೆಟ್‌ಗೆ 79 (ದೀಪ್ತಿ ಶರ್ಮಾ ಔಟಾಗದೆ 45, ಮೋನಾ ಮೆಷ್ರಮ್‌ ಔಟಾಗದೆ 14; ಮಾನಸಿ ಜೋಶಿ 11ಕ್ಕೆ1, ಅನುಜಾ ಪಾಟೀಲ್‌ 13ಕ್ಕೆ1, ರಾಧಾ ಯಾದವ್‌ 12ಕ್ಕೆ1).

ಫಲಿತಾಂಶ: ವಿಜೆಡಿ ನಿಯಮದ ಅನ್ವಯ ಇಂಡಿಯಾ ರೆಡ್‌ಗೆ 7 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !