ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸೋಲು

Last Updated 15 ಅಕ್ಟೋಬರ್ 2018, 16:20 IST
ಅಕ್ಷರ ಗಾತ್ರ

ಮುಂಬೈ : ಬ್ಯಾಟಿಂಗ್‌ ವೈಫಲ್ಯ ಕಂಡ ಭಾರತ ‘ಎ’ ತಂಡದವರು ಆಸ್ಟ್ರೇಲಿಯಾ ‘ಎ’ ಎದುರಿನ ಮಹಿಳಾ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 91ರನ್‌ಗಳಿಂದ ಸೋತಿದ್ದಾರೆ.

ಬಾಂದ್ರಾ ಕುರ್ಲಾ ಸಂಕೀರ್ಣದ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ವನಿತೆಯರು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 271ರನ್‌ ಗಳಿಸಿದರು.

ಈ ತಂಡದ ತಹಿಲಾ ಮೆಕ್‌ಗ್ರಾಥ್‌ (58; 66ಎ, 10ಬೌಂ, 1ಸಿ), ಹೀಥರ್‌ ಗ್ರಹಾಂ (48; 70ಎ, 4ಬೌಂ) ಮತ್ತು ನವೊಮಿ ಸ್ಟಾಲೆನ್‌ಬರ್ಗ್‌ (47; 49ಎ, 6ಬೌಂ, 1ಸಿ) ಉತ್ತಮ ಆಟ ಆಡಿದರು.

ಸವಾಲಿನ ಗುರಿ ಬೆನ್ನಟ್ಟಿದ ಪೂನಮ್‌ ರಾವುತ್‌ ಪಡೆ 46.2 ಓವರ್‌ಗಳಲ್ಲಿ 180ರನ್‌ಗಳಿಗೆ ಆಲೌಟ್‌ ಆಯಿತು.

ಆತಿಥೇಯ ತಂಡದ ಪ್ರೀತಿ ಬೋಸ್‌ (ಔಟಾಗದೆ 62; 80ಎ, 6ಬೌಂ) ಅರ್ಧಶತಕ ಗಳಿಸಿದರು. ಶಿಖಾ ಪಾಂಡೆ (42; 54ಎ, 7ಬೌಂ) ಕೂಡಾ ಮಿಂಚಿದರು. ಆದರೆ ಇತರೆ ಬ್ಯಾಟ್ಸ್‌ವುಮನ್‌ಗಳು ವಿಕೆಟ್‌ ನೀಡಲು ಅವಸರಿಸಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 271 (ಕ್ಲೋಯೆ ಪಿಪಾರೊ 17, ತಹಿಲಾ ಮೆಕ್‌ಗ್ರಾಥ್‌ 58, ಹೀಥರ್‌ ಗ್ರಹಾಂ 48, ನವೊಮಿ ಸ್ಟಾಲೆನ್‌ಬರ್ಗ್‌ 47, ಮಾಲಿ ಸ್ಟ್ರಾನೊ ಔಟಾಗದೆ 37; ರೀಮಾಲಕ್ಷ್ಮಿ ಎಕ್ಕಾ 42ಕ್ಕೆ2, ಪ್ರೀತಿ ಬೋಸ್‌ 42ಕ್ಕೆ3, ರಾಜೇಶ್ವರಿ ಗಾಯಕವಾಡ 48ಕ್ಕೆ1, ಸುಶ್ರೀ ದಿವ್ಯದರ್ಶಿನಿ 51ಕ್ಕೆ1).

ಭಾರತ ‘ಎ’: 46.2 ಓವರ್‌ಗಳಲ್ಲಿ 180 (ಮೋನಾ ಮೆಷ್ರಮ್‌ 28, ಶಿಖಾ ಪಾಂಡೆ 42, ಪ್ರೀತಿ ಬೋಸ್‌ ಔಟಾಗದೆ 62, ರಾಜೇಶ್ವರಿ ಗಾಯಕವಾಡ್‌ 17; ಸ್ಯಾಮಿ ಜೊ ಜಾನ್ಸನ್‌ 28ಕ್ಕೆ2, ಲೌರೆನ್‌ ಚೀಟಲ್‌ 35ಕ್ಕೆ2, ಮೈಟ್ಲಾನ ಬ್ರೌನ್‌ 16ಕ್ಕೆ2, ಸ್ಯಾಮ್‌ ಬೇಟ್ಸ್‌ 21ಕ್ಕೆ1, ಮಾಲಿ ಸ್ಟ್ರಾನೊ 23ಕ್ಕೆ3).

ಫಲಿತಾಂಶ: ಆಸ್ಟ್ರೇಲಿಯಾ ‘ಎ’ ತಂಡಕ್ಕೆ 91ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT