ಪರ್ತ್: ಜೆಮಿಮಾ ರಾಡ್ರಿಗಸ್ ಹೋರಾಟದ ಅರ್ಧ ಶತಕ ಗಳಿಸಿದರೂ, ಆಸ್ಟ್ರೇಲಿಯಾದ ವೇಗದ ಬೌಲರ್ಗಳಾದ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಲ್ಯೂಸಿ ಹ್ಯಾಮಿಲ್ಟನ್ ಅವರು ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವಾದ ಶುಕ್ರವಾರ ಭಾರತ ತಂಡವನ್ನು 198 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.

ಈ ಹಗಲು–ರಾತ್ರಿ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದಾಗ ಆತಿಥೇಯ ತಂಡ 3 ವಿಕೆಟ್ಗೆ 96 ರನ್ ಗಳಿಸಿತು. ಅನುಭವಿಗಳಾದ ಎಲಿಸ್ ಪೆರಿ (ಔಟಾಗದೇ 43) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (ಔಟಾಗದೇ 20) ಅವರು ಮುರಿಯದ ನಾಲ್ಕನೇ ವಿಕೆಟ್ಗೆ 38 ರನ್ ಸೇರಿಸಿದ್ದಾರೆ.

ಭಾರತ ತಂಡದ ಅನುಭವಿ ಆಟಗಾರ್ತಿ ಜೆಮಿಮಾ 84 ಎಸೆತಗಳಲ್ಲಿ 52 ರನ್ (4x7) ಬಾರಿಸಿದರು. ಆದರೆ ಅವರಿಗೆ ಇತರ ಆಟಗಾರ್ತಿಯರಿಂದ ಹೇಳಿಕೊಳ್ಳುವಂಥ ಬೆಂಬಲ ದೊರೆಯಲಿಲ್ಲ. ಇನಿಂಗ್ಸ್ನಲ್ಲಿ ಒಂದೂ ಅರ್ಧಶತಕದ ಜೊತೆಯಾಟ ದಾಖಲಾಗಲಿಲ್ಲ.

ಇದಕ್ಕೆ ಮೊದಲು ಭಾರತ ತಂಡ ಸದರ್ಲ್ಯಾಂಡ್ (46ಕ್ಕೆ4) ಮತ್ತು ಪದಾರ್ಪಣೆ ಪಂದ್ಯ ಆಡಿದ ಲ್ಯೂಸಿ (31ಕ್ಕೆ3) ಅವರ ದಾಳಿಯ ಎದುರು ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಆರಂಭ ಆಟಗಾರ್ತಿ ಸ್ಮೃತಿ ಮಂದಾನ (4) ಮೊದಲು ನಿರ್ಗಮಿಸಿದರು. ಶಫಾಲಿ ವರ್ಮಾ (35) ಉತ್ತಮವಾಗಿ ಇನಿಂಗ್ಸ್ ಶುರು ಮಾಡಿದರೂ, ಸದರ್ಲ್ಯಾಂಡ್ ಬೌಲಿಂಗ್ನಲ್ಲಿ ಚೆಂಡನ್ನು ಕೆಣಕಿ ವಿಕೆಟ್ಕೀಪರ್ಗೆ ಕ್ಯಾಚ್ ನೀಡಿದರು. ಪದಾರ್ಪಣೆ ಮಾಡಿದ ಪ್ರತಿಕಾ ರಾವಲ್ (18) ಮತ್ತು ನಾಯಕಿ ಹರ್ಮನ್ಪ್ರೀತಗ್ ಕೌರ್ (19) ಕೂಡ ವಿಫಲರಾದರು. ಆಗ ಮೊತ್ತ 5 ವಿಕೆಟ್ಗೆ 107.

ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ಜೆಮಿಮಾ ತಡೆದರು. ಒಂಬತ್ತನೇ ವಿಕೆಟ್ಗೆ ಕಶ್ವಿ ಗೌತಮ್ (ಔಟಾಗದೇ 34) ಮತ್ತು ಸಯಾಲಿ ಸಾತ್ಗರೆ (7, 35ಎ) ಅವರು 38 ರನ್ ಸೇರಿಸಿದ್ದರಿಂದ ತಂಡದ ಮೊತ್ತ 200ರ ಸಮೀಪ ತಲುಪಿತು. ಇಬ್ಬರಿಗೂ ಇದು ಮೊದಲ ಟೆಸ್ಟ್ ಆಗಿತ್ತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ಭಾರತ ಮಹಿಳಾ ತಂಡ: 62.4 ಓವರುಗಳಲ್ಲಿ 198 (ಶಫಾಲಿ ವರ್ಮಾ 35, ಜೆಮಿಮಾ ರಾಡ್ರಿಗಸ್ 52, ಕಶ್ವಿ ಗೌತಮ್ ಔಟಾಗದೇ 34; ಡಾರ್ಸಿ ಬ್ರೌನ್ 41ಕ್ಕೆ2, ಲ್ಯೂಸಿ ಹ್ಯಾಮಿಲಸ್ಟನ್ 31ಕ್ಕೆ3, ಅನ್ನಾಬೆಲ್ ಸದರ್ಲ್ಯಾಂಡ್ 46ಕ್ಕೆ4)

ಆಸ್ಟ್ರೇಲಿಯಾ ಮಹಿಳಾ ತಂಡ: 27 ಓವರುಗಳಲ್ಲಿ 3 ವಿಕೆಟ್ಗೆ 96 (ಎಲಿಸ್ ಪೆರಿ ಬ್ಯಾಟಿಂಗ್ 43, ಅನ್ನಾಬೆಲ್ ಸದರ್ಲ್ಯಾಂಡ್ ಬ್ಯಾಟಿಂಗ್ 20; ಸಯಾಲಿ ಸತ್ಗಾರೆ 24ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.