ಮಹಿಳಾ ಕ್ರಿಕೆಟ್‌: ಶ್ರೀಲಂಕಾ ಎದುರು ಗೆದ್ದ ಭಾರತ

7
ತಾನಿಯಾ ಭಾಟಿಯಾ, ಮಿಥಾಲಿ ರಾಜ್‌ ಅರ್ಧಶತಕ:ರಾಜೇಶ್ವರಿಗೆ ಎರಡು ವಿಕೆಟ್‌

ಮಹಿಳಾ ಕ್ರಿಕೆಟ್‌: ಶ್ರೀಲಂಕಾ ಎದುರು ಗೆದ್ದ ಭಾರತ

Published:
Updated:
Deccan Herald

ಗಾಲ್‌: ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ (68; 66ಎ, 9ಬೌಂ) ಮತ್ತು ನಾಯಕಿ ಮಿಥಾಲಿ ರಾಜ್‌ (52; 121ಎ, 4ಬೌಂ) ಅವರ ಅರ್ಧಶತಕಗಳ ಬಲದಿಂದ ಭಾರತ ಮಹಿಳಾ ಕ್ರಿಕೆಟ್‌ ತಂಡ ಐಸಿಸಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಏಳು ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿದೆ.

ಗಾಲ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಮಿಥಾಲಿ ಬಳಗ 50 ಓವರ್‌ಗಳಲ್ಲಿ 219ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಚಾಮರಿ ಅಟಪಟ್ಟು ಪಡೆ 48.1 ಓವರ್‌ಗಳಲ್ಲಿ 212ರನ್‌ಗಳಿಗೆ ಆಲೌಟ್ ಆಯಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ಸ್ಮೃತಿ ಮಂದಾನ (14; 14ಎ, 3ಬೌಂ) ಮತ್ತು ‍ಪೂನಮ್‌ ರಾವತ್‌ (3) ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತು.

ಹರ್ಮನ್‌ಪ್ರೀತ್‌ ಕೌರ್ (7) ಹಾಗೂ ದೀಪ್ತಿ ಶರ್ಮಾ (12) ಕೂಡಾ ವಿಕೆಟ್‌ ನೀಡಲು ಅವಸರಿಸಿದರು. ಈ ಹಂತದಲ್ಲಿ ಮಿಥಾಲಿ ಮತ್ತು ತಾನಿಯಾ ಅಮೋಘ ಜೊತೆಯಾಟ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ದಯಾಳನ್‌ ಹೇಮಲತಾ (35; 31ಎ, 3ಬೌಂ, 1ಸಿ) ಕೂಡಾ ತಂಡದ ಮೊತ್ತ ಹೆಚ್ಚಿಸಲು ನೆರವಾದರು.

ಗುರಿ ಬೆನ್ನಟ್ಟಿದ ಲಂಕಾ ಕೂಡಾ ಆರಂಭಿಕ ಸಂಕಷ್ಟ ಎದುರಿಸಿತು. ನಾಯಕಿ ಚಾಮರಿ (57; 95ಎ, 8ಬೌಂ, 1ಸಿ) ಮತ್ತು ಶಶಿಕಲಾ ಸಿರಿವರ್ದನೆ (49; 91ಎ, 6ಬೌಂ) ದಿಟ್ಟ ಬ್ಯಾಟಿಂಗ್‌ ನಡೆಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು. ಇವರ ವಿಕೆಟ್‌ ಪತನವಾದ ನಂತರ ತಂಡ ಕುಸಿತದ ಹಾದಿ ಹಿಡಿಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ, 50 ಓವರ್‌ಗಳಲ್ಲಿ 219 (ಸ್ಮೃತಿ ಮಂದಾನ 14, ಮಿಥಾಲಿ ರಾಜ್‌ 52, ದೀಪ್ತಿ ಶರ್ಮಾ 13, ತಾನಿಯಾ ಭಾಟಿಯಾ 68, ದಯಾಳನ್‌ ಹೇಮಲತಾ 35, ಶಿಖಾ ಪಾಂಡೆ 14; ಉದೇಶಿಕಾ ಪ್ರಬೋಧನಿ 45ಕ್ಕೆ2, ಶ್ರೀಪಾಲಿ ವೀರಕ್ಕೋಡಿ 36ಕ್ಕೆ2, ಇನೊಕಾ ರಣವೀರ 40ಕ್ಕೆ1, ಶಶಿಕಲಾ ಸಿರಿವರ್ದನೆ 28ಕ್ಕೆ1, ಚಾಮರಿ ಅಟಪಟ್ಟು 42ಕ್ಕೆ3).

ಶ್ರೀಲಂಕಾ: 48.1 ಓವರ್‌ಗಳಲ್ಲಿ 212 (ಪ್ರಸಾದನಿ ವೀರಕ್ಕೋಡಿ 11, ಚಾಮರಿ ಅಟಪಟ್ಟು 57, ಶಶಿಕಲಾ ಸಿರಿವರ್ದನೆ 49, ಅನುಷ್ಕಾ ಸಂಜೀವನಿ 17, ಶ್ರೀಪಾಲಿ ವೀರಕ್ಕೋಡಿ 17, ನೀಲಾಕ್ಷಿ ಡಿಸಿಲ್ವ 31; ಮಾನಸಿ ಜೋಷಿ 49ಕ್ಕೆ2, ಶಿಖಾ ಪಾಂಡೆ 21ಕ್ಕೆ1, ದೀಪ್ತಿ ಶರ್ಮಾ 19ಕ್ಕೆ1, ರಾಜೇಶ್ವರಿ ಗಾಯಕವಾಡ 37ಕ್ಕೆ2, ಪೂನಮ್‌ ಯಾದವ್‌ 41ಕ್ಕೆ1).

ಫಲಿತಾಂಶ: ಭಾರತಕ್ಕೆ 7ರನ್‌ ಗೆಲುವು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !