ಗುರುವಾರ , ಏಪ್ರಿಲ್ 2, 2020
19 °C

ಮಹಿಳಾ ಕ್ರಿಕೆಟ್‌: ಕರ್ನಾಟಕ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೋಟ್‌: ಕರ್ನಾಟಕ ತಂಡ, 19 ವರ್ಷದೊಳಗಿನವರ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ  ಸೌರಾಷ್ಟ್ರ ತಂಡವನ್ನು 178 ರನ್‌ಗಳಿಂದ ಸೋಲಿಸಿತು. ರೈಲ್ವೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಎಂ.ಪೂಜಾ ಕುಮಾರಿ (9ಕ್ಕೆ4) ಬೌಲಿಂಗ್‌ನಲ್ಲಿ ಮಿಂಚಿದರು.

ಗೆಲುವಿಗಾಗಿ ಕರ್ನಾಟಕ ನಾಲ್ಕು ಪಾಯಿಂಟ್ಸ್‌ ಪಡೆಯಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 50 ಓವರುಗಳಲ್ಲಿ 9 ವಿಕೆಟ್‌ಗೆ 219 (ರೋಷನಿ ಕಿರಣ್‌ 39, ಕೃಷಿಕಾ ರೆಡ್ಡಿ 46, ಅದಿತಿ ರಾಜೇಶ್‌ 45; ಎಸ್‌.ಜೇತ್ವಾ 30ಕ್ಕೆ2, ಎಂ.ಮೋಧ್ವಾಡಿಯಾ 35ಕ್ಕೆ2, ಜೆ.ಶ್ರುತಿ 43ಕ್ಕೆ2); ಸೌರಾಷ್ಟ್ರ: 24 ಓವರುಗಳಲ್ಲಿ 41 (ಪೂಜಾ ಕುಮಾರಿ 9ಕ್ಕೆ4, ಅನಘಾ 9ಕ್ಕೆ2).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು