ಬೆಂಗಳೂರು: ಲಾವಣ್ಯಾ ಚಲನಾ (97;143ಎ) ಮೂರು ರನ್ಗಳಿಂದ ಶತಕ ವಂಚಿತರಾದರು. ಆದರೆ, ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ಮಹಿಳಾ ತಂಡ ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಎದುರು 4 ವಿಕೆಟ್ಗಳಿಂದ ಸೋಲು ಅನುಭವಿಸಿತು.

ಸೂರತ್ನ ವಿಶಾಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 217 ರನ್ ಗಳಿಸಿತು. ಮಹಾರಾಷ್ಟ್ರ 45.2 ಓವರ್ಗಳಲ್ಲಿ 6 ವಿಕೆಟ್ಗೆ 220 ರನ್ ಗಳಿಸಿ ಜಯ ಸಾಧಿಸಿತು. ಮಹಾರಾಷ್ಟ್ರ ತಂಡದ ಶಾಲ್ಮಲಿ ಕ್ಷತ್ರಿಯ ಔಟಾಗದೇ 78 ರನ್ ಹೊಡೆದು ಗೆಲುವಿನ ರೂವಾರಿಯಾದರು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್ಗಳಲ್ಲಿ 8ಕ್ಕೆ 217 (ಎಚ್. ಭಾವಿಕಾ ರೆಡ್ಡಿ 35, ಲಾವಣ್ಯಾ ಚಲನಾ 97, ಕಾರ್ಣಿಕಾ ಕಾರ್ತಿಕ್ 47, ಜಾನ್ಹವಿ ವಿರ್ಕಿರ್ 15ಕ್ಕೆ 2, ಶೃತಿ ಎಂ. 46ಕ್ಕೆ 2). ಮಹಾರಾಷ್ಟ್ರ 45.2 ಓವರ್ಗಳಲ್ಲಿ 6ಕ್ಕೆ 220 (ಶಾಲ್ಮಲಿ ಕ್ಷತ್ರಿಯ ಔಟಾಗದೇ 78, ಪ್ರಿಯಾ ಎಸ್. ಚೌಹಾಣ್ 45ಕ್ಕೆ 2, ವಂದಿತಾ ಕೆ.ರಾವ್ 31ಕ್ಕೆ 2). ಫಲಿತಾಂಶ: ಮಹಾರಾಷ್ಟ್ರಕ್ಕೆ 4 ವಿಕೆಟ್ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.