ಶನಿವಾರ, ಅಕ್ಟೋಬರ್ 19, 2019
27 °C

70ರನ್‌ಗಳಿಗೆ ಆಲೌಟ್‌ ಆದ ಭಾರತ ಮಹಿಳಾ ತಂಡ

Published:
Updated:

ಸೂರತ್‌: ದಕ್ಷಿಣ ಆಫ್ರಿಕಾದ ಆಟಗಾರ್ತಿಯರ ಬೌಲಿಂಗ್‌ ದಾಳಿಗೆ ಕಂಗೆಟ್ಟ ಭಾರತದ ಮಹಿಳಾ ತಂಡದವರು ಆರನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 70ರನ್‌ಗಳಿಗೆ ಆಲೌಟ್‌ ಆದರು.

ಅಂತಿಮ ಪಂದ್ಯದಲ್ಲಿ 105ರನ್‌ಗಳಿಂದ ಸೋತರೂ ಕೂಡ ಹರ್ಮನ್‌ಪ್ರೀತ್‌ ಕೌರ್‌ ಬಳಗ 3–1ರಿಂದ ಸರಣಿ ಜಯಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 175ರನ್‌ ದಾಖಲಿಸಿತು. ಆರಂಭಿಕರಾದ ಲಿಜೆಲ್ಲೆ ಲೀ (84; 47ಎ, 15ಬೌಂ, 1ಸಿ) ಮತ್ತು ಸ್ಯೂನ್‌ ಲುಸ್‌ (62; 56ಎ, 7ಬೌಂ) ಅರ್ಧಶತಕ ಗಳಿಸಿ ಮಿಂಚಿದರು. ಇವರು ಮೊದಲ ವಿಕೆಟ್‌ಗೆ 144ರನ್‌ ಸೇರಿಸಿದರು.

ಆತಿಥೇಯರು 17.3 ಓವರ್‌ಗಳಲ್ಲಿ ಹೋರಾಟ ಮುಗಿಸಿದರು. ವೇದಾ ಕೃಷ್ಣಮೂರ್ತಿ (26; 24ಎ, 3ಬೌಂ) ಮತ್ತು ಅರುಂಧತಿ ರೆಡ್ಡಿ (22; 25ಎ, 3ಬೌಂ) ಭಾರತದ ಪರ ಗರಿಷ್ಠ ಸ್ಕೋರರ್‌ ಎನಿಸಿದರು. ಕೇವಲ ಮೂರು ಎಸೆತಗಳನ್ನು ಹಾಕಿದ ನೊಂಡುಮಿಸೊ ಶಾಂಗಸೆ, ರನ್‌ ನೀಡದೆ ಎರಡು ವಿಕೆಟ್‌ ಉರುಳಿಸಿದರು.

ಹರ್ಮನ್‌ ದಾಖಲೆ: ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಶುಕ್ರವಾರ 100ನೇ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಆಡಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಭಾಜನರಾದರು. ‘ಶತಕ’ದ ಪಂದ್ಯದಲ್ಲಿ ಅವರು ಕೇವಲ ಒಂದು ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 175 (ಲಿಜೆಲ್ಲೆ ಲೀ 84, ಸ್ಯೂನ್‌ ಲುಸ್‌ 62; ಪೂನಮ್‌ ಯಾದವ್‌ 34ಕ್ಕೆ1, ಅರುಂಧತಿ ರೆಡ್ಡಿ 28ಕ್ಕೆ1, ಹರ್ಮನ್‌ಪ್ರೀತ್‌ ಕೌರ್‌ 5ಕ್ಕೆ1).

ಭಾರತ: 17.3 ಓವರ್‌ಗಳಲ್ಲಿ 70 (ವೇದಾ ಕೃಷ್ಣಮೂರ್ತಿ 26, ಅರುಂಧತಿ ರೆಡ್ಡಿ 22; ಶಬನಿಮ್‌ ಇಸ್ಮಾಯಿಲ್‌ 11ಕ್ಕೆ2, ನದಿನ್‌ ಡಿ ಕ್ಲೆರ್ಕ್‌ 18ಕ್ಕೆ3, ಅನಾ ಬಾಷ್‌ 13ಕ್ಕೆ2, ನೊಂಡುಮಿಸೊ ಶಾಂಗಸೆ 0ಕ್ಕೆ2). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 105ರನ್‌ ಗೆಲುವು. ಪಂದ್ಯಶ್ರೇಷ್ಠ: ಲಿಜೆಲ್ಲೆ ಲೀ. ಸರಣಿ ಶ್ರೇಷ್ಠ: ದೀಪ್ತಿ ಶರ್ಮಾ.

Post Comments (+)