ಭಾರತ ಸೆಮಿಫೈನಲ್‌ ಪ್ರವೇಶಕ್ಕೆ ಇನ್ನೊಂದೇ ಹೆಜ್ಜೆ

7
ವಿಶ್ವಕಪ್ ಕ್ರಿಕೆಟ್

ಭಾರತ ಸೆಮಿಫೈನಲ್‌ ಪ್ರವೇಶಕ್ಕೆ ಇನ್ನೊಂದೇ ಹೆಜ್ಜೆ

Published:
Updated:

ಗಯಾನಾ: ವಿಶ್ವಕಪ್ ಗೆಲುವಿನ ಛಲದಲ್ಲಿರುವ  ಭಾರತ ಮಹಿಳೆಯರ ಕ್ರಿಕೆಟ್ ತಂಡವು ಗುರುವಾರ ನಡೆಯುವ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಹಾಕುವ ಛಲದಲ್ಲಿದೆ.

ಗಯಾನಾದ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ  ಐರ್ಲೆಂಡ್ ತಂಡವನ್ನು ಭಾರತವು ಎದುರಿಸಲಿದೆ. ‘ಬಿ’ ಗುಂಪಿನ ಮೊದಲ ಪಂದ್ಯ ಇಲ್ಲಿಯೇ ನಡೆದಿದ್ದು, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶತಕ ಬಾರಿಸಿ ದಾಖಲೆ ಮಾಡಿದ್ದರು. ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವೂ ಹರ್ಮನ್‌ ಪಡೆಯು ಗೆದ್ದಿತ್ತು. ಗುಂಪಿನಲ್ಲಿ ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸೆಮಿ ಸ್ಥಾನ ಖಚಿತ.

ಐರ್ಲೆಂಡ್ ತಂಡವು  ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳೆದುರು ನಡೆದಿದ್ದ ಪಂದ್ಯಗಳಲ್ಲಿ ಸೋಲನುಭವಿಸಿದೆ. ಆದರೆ ತನ್ನ ಛಲದ ಹೋರಾಟದಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ತಂಡಕ್ಕೆ ಇದೆ. ಆದ್ದರಿಂದ ಹರ್ಮನ್‌ ಬಳಗವು ಎಚ್ಚರಿಕೆಯ ಹೆಜ್ಜೆ ಇಡುವ ನಿರೀಕ್ಷೆ ಇದೆ.

ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್, ಅನುಭವಿ ಆಟಗಾರ್ತಿ ಮಿಥಾಲಿ ರಾಜ್, ಕನ್ನಡತಿ ವೇದಾ ಕೃಷ್ಣಮೂರ್ತಿ, ನಾಯಕಿ ಹರ್ಮನ್‌ಪ್ರೀತ್ ಅವರು ಉತ್ತಮ ಲಯದಲ್ಲಿದ್ದಾರೆ. ಪ್ರಮುಖ ಆಟಗಾರ್ತಿ ಸ್ಮೃತಿ ಮಂದಾನಾ ಫಾರ್ಮ್‌ಗೆ ಮರಳಿದರೆ ತಂಡದ ಬ್ಯಾಟಿಂಗ್ ಬಲ ಹೆಚ್ಚುವುದು ಖಚಿತ. ಬೌಲಿಂಗ್‌ನಲ್ಲಿ ಯುವ ಪ್ರತಿಭೆ ದಯಾಳನ್ ಹೇಮಲತಾ ಮತ್ತು ಪೂನಂ ಯಾದವ್ ಅವರು ಈಗಾಗಲೇ ತಮ್ಮ ಕೈಚಳಕ ತೋರಿದ್ದಾರೆ. ಅವರ ಆಟವು ಇದೇ ರೀತಿ ಮುಂದುವರಿದರೆ ಎದುರಾಳಿ ತಂಡಗಳ ಬ್ಯಾಟ್ಸ್‌ವುಮನ್‌ಗಳ ಮೇಲೆ ಒತ್ತಡ ಹೆಚ್ಚುವುದು ಖಚಿತ.

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಮಿಥಾಲಿ ರಾಜ್, ಜಿಮಿಮಾ ರಾಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ, ಏಕ್ತಾ ಬಿಷ್ಠ್ , ದಯಾಳನ್ ಹೇಮಲತಾ, ಮಾನಸಿ ಜೋಶಿ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ.

ಐರ್ಲೆಂಡ್:  ಲಾರಾ ಡೆಲೆನಿ (ನಾಯಕಿ), ಕಿಮ್ ಗಾರ್ಥ್, ಸಿಸಿಲಿಯಾ ಜೊಯ್ಸ್, ಇಸೊಬೆಲ್ ಜಾಯ್ಸ್‌, ಶಾನಾ ಕಾವನಗ್, ಆ್ಯಮಿ ಕೆನಿರ್ಲಿ, ಗ್ಯಾಬಿ ಲೂಯಿಸ್, ಲಾರಾ ಮ್ಯಾರಿಜ್, ಕೈರಾ ಮೆಟ್‌ಕೆಫೆ, ಲೂಸಿ ಒರೀಲಿ, ಸೆಲೆಸ್ಟೆ ರಾಕ್,  ಈಮಿಯರ್ ರಿಚರ್ಡ್ಸ್‌ನ್, ಕ್ಲಾರೆ ಶಿಲ್ಲಿಂಗ್ಟನ್, ರೆಬೆಕ್ಕಾ ಸ್ಟೊಕೆಲ್, ಮೇರಿ ವಾಲ್ಡರನ್,.

ಪಂದ್ಯ ಆರಂಭ: ರಾತ್ರಿ 8.30

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !