ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕ್ರಿಕೆಟ್‌ಗೆ ಮೆರುಗು ತಂದ ವರ್ಷ

Last Updated 18 ಏಪ್ರಿಲ್ 2019, 19:44 IST
ಅಕ್ಷರ ಗಾತ್ರ

‍ಕಪಿಲ್‌ ದೇವ್ ನೇತೃತ್ವದ ಭಾರತ ತಂಡ ವಿಶ್ವ ಕ್ರಿಕೆಟ್‌ನ ಸಾಮ್ರಾಟನಾಗಿ ಮೆರೆದ ವರ್ಷವದು. ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ನಲ್ಲಿ ‘ಕಪಿಲ್‌ ಡೆವಿಲ್ಸ್‌’ ಪಡೆ ವಿಶ್ವಕಪ್‌ ಟ್ರೋಫಿಗೆ ಮುತ್ತಿಕ್ಕಿ ಹೊಸ ಮೈಲುಗಲ್ಲು ಸ್ಥಾಪಿಸಿತ್ತು.

ಲೀಗ್ ಹಂತದಿಂದಲೂ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಾ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಭಾರತ, ಫೈನಲ್‌ನಲ್ಲೂ ಮೋಡಿ ಮಾಡಿತ್ತು. ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ಗೆ ಆಘಾತ ನೀಡಿದ್ದು ಅವಿಸ್ಮರಣೀಯ.

ಟೂರ್ನಿಯ ಅವಧಿ: ಜೂನ್‌ 9ರಿಂದ 25
ಆತಿಥ್ಯ: ಇಂಗ್ಲೆಂಡ್‌ ಮತ್ತು ವೇಲ್ಸ್‌
ಭಾಗವಹಿಸಿದ ತಂಡಗಳು: 8
ಓವರ್‌: 60–60
ಒಟ್ಟು ಪಂದ್ಯಗಳು: 27‌
ಮಾದರಿ: ಡಬಲ್‌ ರೌಂಡ್‌ ರಾಬಿನ್‌ ಮತ್ತು ನಾಕೌಟ್‌
ಗರಿಷ್ಠ ರನ್‌: ಇಂಗ್ಲೆಂಡ್‌ನ ಡೇವಿಡ್‌ ಗೋವರ್‌ (384)
ಗರಿಷ್ಠ ವಿಕೆಟ್‌: ಭಾರತದ ರೋಜರ್‌ ಬಿನ್ನಿ (18)

* ಟೂರ್ನಿಯಲ್ಲಿ ಭಾಗವಹಿಸಿದ್ದ ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿತ್ತು.
* ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಳಿಸಿದ್ದವು.
* ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌, ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳು ಭಾಗವಹಿಸಿದ್ದವು.
* ಜಿಂಬಾಬ್ವೆ ಆಡಿದ ಚೊಚ್ಚಲ ವಿಶ್ವಕಪ್‌ ಇದು. ಈ ತಂಡ 1982ರ ಐಸಿಸಿ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದು ವಿಶ್ವಕಪ್‌ಗೆ ಅರ್ಹತೆ ಗಳಿಸಿತ್ತು.
* ಲಾರ್ಡ್ಸ್‌, ಟ್ರೆಂಟ್‌ ಬ್ರಿಡ್ಜ್‌, ಹೆಡಿಂಗ್ಲೆ, ದಿ ಓವಲ್‌, ಎಜ್‌ಬಾಸ್ಟನ್‌, ಕೌಂಟಿ, ಸೇಂಟ್‌ ಹೆಲೆನ್ಸ್‌, ಗ್ರೇಸ್‌ ರೋಡ್‌, ಓಲ್ಡ್‌ ಟ್ರಾಫರ್ಡ್‌, ನ್ಯೂ ರೋಡ್‌ ಮತ್ತು ನೆವಿಲ್‌ ಮೈದಾನಗಳಲ್ಲಿ ಪಂದ್ಯಗಳು ಆಯೋಜನೆಯಾಗಿದ್ದವು.
* ಭಾರತ ತಂಡ ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ಜೊತೆ ‘ಬಿ’ ಗುಂಪಿನಲ್ಲಿ ಆಡಿತ್ತು.
* ಗುಂಪು ಹಂತದಲ್ಲಿ ಆರು ಪಂದ್ಯಗಳನ್ನಾಡಿದ್ದ ಕಪಿಲ್‌ ಪಡೆ ನಾಲ್ಕರಲ್ಲಿ ಗೆದ್ದು ಎರಡನೇ ಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು.
* 1975ರಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ್ದ ಆಸ್ಟ್ರೇಲಿಯಾ ತಂಡ ಗುಂಪು ಹಂತದಲ್ಲೇ ಹೊರಬಿದ್ದಿತ್ತು.
* ಟೂರ್ನಿಯನ್ನು ಒಟ್ಟು 2,31,081 ಮಂದಿ ವೀಕ್ಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT