ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1992: ಆಸ್ಟ್ರೇಲಿಯಾ–ನ್ಯೂಜಿಲೆಂಡ್ ಜಂಟಿ ಆತಿಥ್ಯ

Last Updated 8 ಮೇ 2019, 16:32 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ–ನ್ಯೂಜಿಲೆಂಡ್ ಜಂಟಿಯಾಗಿ ಆತಿಥ್ಯ ವಹಿಸಿದ ಮೊದಲ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಇದು. ಜಂಟಿ ಆತಿಥ್ಯ ವಹಿಸಿದ್ದ ಈ ತಂಡಗಳು ಬಲಿಷ್ಠವಾಗಿದ್ದವು ಕೂಡ. 1987ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ ಹುರುಪಿನಿಂದಲೇ ಕಣಕ್ಕಿಳಿದಿತ್ತು. ಅಭಿಮಾನಿಗಳ ಅಬ್ಬರವೂ ಜೋರಾಗಿತ್ತು. ನ್ಯೂಜಿಲೆಂಡ್‌ ಕೂಡ ಚೊಚ್ಚಲ ವಿಶ್ವಕಪ್‌ ಗೆಲ್ಲುವ ಉಮೇದಿನಲ್ಲಿತ್ತು.

* ಮೊಹಮ್ಮದ್‌ ಅಜರುದ್ದಿನ್‌ ಅವರು ಭಾರತ ತಂಡವನ್ನು ಮುನ್ನಡೆಸಿದರು.

* ಭಾರತದ ಸಚಿನ್‌ ತೆಂಡೂಲ್ಕರ್‌ ಹಾಗೂ ವೆಸ್ಟ್‌ ಇಂಡೀಸ್‌ನ ಬ್ರಯನ್‌ ಲಾರಾ ಅವರ ಪಾಲಿಗಿದು ಚೊಚ್ಚಲ ವಿಶ್ವಕಪ್‌.

* 1992ರ ಫೆಬ್ರುವರಿ 22ರಿಂದ ಮಾರ್ಚ್‌ 25ರವರೆಗೆ ಪಂದ್ಯಗಳು ನಡೆದವು.

* ಆತಿಥೇಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಅಲ್ಲದೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ವೆಸ್ಟ್‌ಇಂಡೀಸ್‌, ಶ್ರೀಲಂಕಾ ತಂಡಗಳು ಪಾಲ್ಗೊಂಡಿ ದ್ದವು.

* ವರ್ಣಬೇಧ ನೀತಿಯಿಂದಾಗಿ ನಿಷೇಧಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡಲು ಇಳಿಯಿತು.

* ವಿಶ್ವಕಪ್‌ನಲ್ಲಿ ಮೊದಲ ಬಾರಿ ಬಣ್ಣದ ಪೋಷಾಕಿನಲ್ಲಿ ತಂಡಗಳು ಕಣಕ್ಕಿಳಿದವು. ‌

* ಮೊದಲ ಬಾರಿ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆದವು. ಬಿಳಿ ಚೆಂಡು, ಕಪ್ಪು ಸೈಟ್‌ಸ್ಕ್ರೀನ್‌ ಬಳಸಲಾಯಿತು.

* ರೌಂಡ್‌ ರಾಬಿನ್‌ ಮಾದರಿಯ ಟೂರ್ನಿಯಲ್ಲಿ ಒಟ್ಟು 39 ಪಂದ್ಯಗಳು ನಡೆದವು. ಪ್ರತಿ ತಂಡ ಪರಸ್ಪರ ಪೈಪೋಟಿ ನಡೆಸಿದವು. ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದವು.

* ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ (ಈಡನ್‌ ಪಾರ್ಕ್‌) ಉದ್ಘಾಟನಾ ಪಂದ್ಯ ನಡೆಯಿತು.

* ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಪೈಪೋಟಿ ನಡೆಸಿದವು. ಕಿವೀಸ್‌ ಬಳಗ 37 ರನ್‌ಗಳಿಂದ ಶುಭಾರಂಭ ಮಾಡಿತು.

* 18 ಕ್ರೀಡಾಂಗಣಗಳಲ್ಲಿ 33 ದಿನ 39 ಪಂದ್ಯಗಳು ನಡೆದವು.

* ಇದು ಪಾಕಿಸ್ತಾನ ತಂಡದ ಇಮ್ರಾನ್‌ ಖಾನ್‌ ಹಾಗೂ ಭಾರತದ ಕೃಷ್ಣಮಾಚಾರಿ ಶ್ರೀಕಾಂತ್‌ ಅವರಿಗೆ ವಿದಾಯದ ಟೂರ್ನಿಯೂ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT