ಪಂದ್ಯಕ್ಕೆ ಮಳೆ ಅಡ್ಡಿ ಪರಿಹಾರಕ್ಕೆ ಗಂಗೂಲಿ ಸಲಹೆ

ಮಂಗಳವಾರ, ಜೂನ್ 25, 2019
30 °C

ಪಂದ್ಯಕ್ಕೆ ಮಳೆ ಅಡ್ಡಿ ಪರಿಹಾರಕ್ಕೆ ಗಂಗೂಲಿ ಸಲಹೆ

Published:
Updated:
Prajavani

ಲಂಡನ್: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದಾಗಿ ಪಂದ್ಯಗಳು ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಭಾರತದ ಹಿರಿಯ  ಆಟಗಾರ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

‘ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ನಾವು ಕುಡ ಇಂಗ್ಲೆಂಡ್‌ನಲ್ಲಿ ತಯಾರಾದ ಕವರ್‌ಗಳನ್ನೇ ಬಳಸುತ್ತಿದ್ದೇವೆ. ಆದರೆ, ಪಿಚ್‌ ಜೊತೆಗೆ ಔಟ್‌ಫೀಲ್ಡ್‌ಗೂ ಹೊದಿಕೆ ಹಾಕುತ್ತೇವೆ. ಆದ್ದರಿಂದ ಮಳೆ ನಿಂತು ಹತ್ತು ನಿಮಿಷದ ನಂತರ ಹೊದಿಕೆ ತೆಗೆದರೆ ಮೈದಾನದಲ್ಲಿ ತೇವ ತೀರಾ ಕಡಿಮೆ ಇರುತ್ತದೆ. ಬರೀ ಪಿಚ್ ಮೇಲೆ ಹೊದಿಕೆ ಹಾಕುವುದರಿಂದ ಪ್ರಯೋಜನವಿಲ್ಲ. ಮೂವರ್ತು ಯಾರ್ಡ್ಸ್‌ ಏರಿಯಾದಲ್ಲಿ ನೀರು ಹಾಗೆಯೇ ಉಳಿಯುತ್ತದೆ. ಇದರಿಂದಾಗಿ ಹುಲ್ಲಿನಂಕಣದಲ್ಲಿ ನೀರು ಬೇಗ ಒಣಗುವುದಿಲ್ಲ’ ಎಂದು ಹೇಳಿದ್ದಾರೆ.

‘ಇಂಗ್ಲೆಂಡ್‌ನಲ್ಲಿಯೇ ಕವರ್‌ಗಳು ಲಭ್ಯವಾಗುವುದರಿಂದ ತೆರಿಗೆ ರಹಿತವಾಗಿರುತ್ತವೆ. ಆದ್ದರಿಂದ ಖರ್ಚು ಕೂಡ ಕಡಿಮೆಯಾಗುತ್ತದೆ. ಮುಖ್ಯವಾದ ಪಂದ್ಯಗಳನ್ನು ನಡೆಸಲು ಈ ಕ್ರಮ ಅಗತ್ಯ’ ಎಂದು ಅವರು ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯವು ಮಳೆಗೆ ರದ್ದಾದ ನಂತರ ಮಾತನಾಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 4

  Frustrated
 • 2

  Angry

Comments:

0 comments

Write the first review for this !