ಇಯಾನ್‌ ಮಾರ್ಗನ್‌ ಸಿಕ್ಸರ್‌ಗಳ ಅಬ್ಬರಕೆ ಬೆಚ್ಚಿದ ಅಫ್ಗಾನ್‌;ಇಂಗ್ಲೆಂಡ್‌ 397 ರನ್

ಬುಧವಾರ, ಜೂಲೈ 17, 2019
29 °C
ವಿಶ್ವಕಪ್‌ ಕ್ರಿಕೆಟ್‌

ಇಯಾನ್‌ ಮಾರ್ಗನ್‌ ಸಿಕ್ಸರ್‌ಗಳ ಅಬ್ಬರಕೆ ಬೆಚ್ಚಿದ ಅಫ್ಗಾನ್‌;ಇಂಗ್ಲೆಂಡ್‌ 397 ರನ್

Published:
Updated:

ಮ್ಯಾಂಚೆಸ್ಟರ್‌: ಭರ್ಜರಿ ಹೊಡೆತಗಳ ಮೂಲಕ ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಮಳೆಗರೆದರು. ಮಾರ್ಗನ್‌ ಅಬ್ಬರಕೆ ಅಫ್ಗಾನ್‌ ಬೌಲರ್‌ಗಳು ದಿಕ್ಕು ಕಾಣದಾದರು. ಇಂಗ್ಲೆಂಡ್‌ 2019ರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಪೇರಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 397 ರನ್‌ ಗಳಿಸಿದೆ. ಒಂದೇ ಇನಿಂಗ್ಸ್‌ನಲ್ಲಿ 25 ಸಿಕ್ಸರ್‌ಗಳು ದಾಖಲಾಗಿ ಹೊಸ ದಾಖಲೆ ಸೃಷ್ಟಿಸಿತು. 

ಕ್ಷಣಕ್ಷಣದ ಸ್ಕೋರ್‌: https://bit.ly/2ImDxL4

ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಇಂಗ್ಲೆಂಡ್‌, ನಾಯಕ ಇಯಾನ್‌ ಮಾರ್ಗನ್‌ ಮಿಂಚಿನ ಆಟದಿಂದಾಗಿ ಸವಾಲಿನ ಮೊತ್ತ ಗಳಿಸಿತು. ಒಂದೇ ಇನಿಂಗ್ಸ್‌ನಲ್ಲಿ 17 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಮಾರ್ಗನ್‌ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆ ಬರೆದರು. 

ಇದನ್ನೂ ಓದಿ: ಸಿಕ್ಸರ್‌ಗಳಿಗೆ ಹೊಸ ’ಸರದಾರ’ ಇಯಾನ್‌ ಮಾರ್ಗನ್‌

ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸಿದ ಸಾಧನೆ ಮಾಡಿದರು. ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದ ಅವರು, 71 ಎಸೆತಗಳಲ್ಲಿ 148 ರನ್‌(17 ಸಿಕ್ಸರ್‌, 4 ಬೌಂಡರಿ) ಗಳಿಸಿ ವಿಕೆಟ್‌ ಒಪ್ಪಿಸಿದರು.

ಆರಂಭದಲ್ಲಿಯೇ ಜೇಮ್ಸ್ ವಿನ್ಸ್‌(26) ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ತಾಳ್ಮೆಯ ಆಟದ ಮೊರೆ ಹೋಯಿತು. ಜಾನಿ ಬೆಸ್ಟೊಗೆ ಜತೆಯಾದ ಜೋ ರೂಟ್‌ ತಂಡದ ರನ್‌ ಸರಾಸರಿಯನ್ನು ಉತ್ತಮ ಪಡಿಸುವ ಪ್ರಯತ್ನ ನಡೆಸಿದರು. 3 ಸಿಕ್ಸರ್‌, 8 ಬೌಂಡರಿ ಒಳಗೊಂಡ 90 ರನ್‌ ಗಳಿಸಿದ್ದ ಜಾನಿ ಬೆಸ್ಟೊ, ಗುಲ್ಬದಿನ್‌ ನೈಬ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಅಪಾಯಕಾರಿಯಾಗಿ ಪರಿಣಮಿಸಿದ್ದ ಜಾನಿ ಬೆಸ್ಟೊ ಶತಕದ ಅಂಚಿನಲ್ಲಿ ಎಡವಿದರು. 

ಜೋ ರೂಟ್‌ ಮತ್ತು ಮಾರ್ಗನ್‌ ಜತೆಯಾಟದಿಂದ ತಂಡದ ಮೊತ್ತ 350ರ ಗಡಿ ದಾಟಿತು. ರೂಟ್‌ ಸಹ ಬಿರುಸಿನ ಆಟದ ಮೂಲಕ 82 ಎಸೆತಗಳಲ್ಲಿ 88 ರನ್‌(5 ಬೌಂಡರಿ, 1 ಸಿಕ್ಸರ್) ಗಳಿಸಿದರು. ಜಾಸ್‌ ಬಟ್ಲರ್ ಮತ್ತು ಬೆನ್‌ ಸ್ಟೋಕ್ಸ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಏಳನೇ ಕ್ರಮಾಂಕದಲ್ಲಿ ಆಡಿದ ಮೊಯೀನ್‌ ಅಲಿ 4 ಸಿಕ್ಸರ್‌, 1 ಬೌಂಡರಿ ಒಳಗೊಂಡಂತೆ ಕೇವಲ 9 ಎಸೆತಗಳಲ್ಲಿ 31 ರನ್‌ ದಾಖಲಿಸುವ ಮೂಲಕ ತಂಡದ ಮೊತ್ತವನ್ನು 400 ರನ್‌ ಸಮೀಪಕ್ಕೆ ತಂದರು. 

ದವ್ಲತ್‌ ಜದ್ರಾನ್‌ ಮತ್ತು ಗುಲ್ಬದಿನ್‌ ನೈಬ್‌ ತಲಾ 3 ವಿಕೆಟ್‌ ಕಬಳಿಸಿದರು. 9 ಓವರ್‌ ಬೌಲಿಂಗ್‌ ನಡೆಸಿದ ರಶೀದ್‌ ಖಾನ್‌ ಯಾವುದೇ ವಿಕೆಟ್‌ ಪಡೆಯದೇ 110 ರನ್‌ ನೀಡಿ ದುಬಾರಿ ಬೌಲರ್ ಎನಿಸಿದರು.

ಆತಿಥೇಯ ತಂಡದ ಆಟಗಾರರಲ್ಲಿ ಕೆಲವರು ಗಾಯಾಳುಗಳಾಗಿದ್ದಾರೆ. ಮೊಣಕಾಲಿನ ಸ್ನಾಯುನೋವಿಗೆ ಒಳಗಾಗಿರುವ ಜೇಸನ್‌ ರಾಯ್‌ ಮತ್ತು ಆರೋಗ್ಯ ಸರಿಯಿರದ ಕಾರಣ ಲಿಯಾಮ್‌ ಫ್ಲಂಕೆಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊಯೀನ್‌ ಅಲಿ ಮತ್ತು ಜೇಮ್ಸ್‌ ವಿನ್ಸ್ ಅವರ ಸ್ಥಾನದಲ್ಲಿ ಕಣಕ್ಕಿಳಿದರು. 

ತಂಡದ ಸಾರಥ್ಯ ವಹಿಸಿರುವ ಇಯಾನ್‌ ಮಾರ್ಗನ್‌, ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದ ವೇಳೆ ಬೆನ್ನು ನೋವಿನಿಂದ ಅರ್ಧದಲ್ಲೇ ಕ್ರೀಡಾಂಗಣ ತೊರೆಯಬೇಕಾಯಿತು. ಅದೇ ಪಂದ್ಯದಲ್ಲಿ ಆರಂಭ ಆಟಗಾರ ಜೇಸನ್‌ ರಾಯ್‌ ಕೂಡ ಮೊಣಕಾಲಿನ ಸ್ನಾಯುರಜ್ಜು ನೋವಿನಿಂದ ಬಳಲಿ ಪೂರ್ಣ ಪಂದ್ಯ ಆಡಲಾಗಲಿಲ್ಲ. 

ಎರಡನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಅಫ್ಗಾನಿಸ್ತಾನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಈ ತಂಡ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್‌ ಎದುರು ಮಣಿದಿದೆ. ಆದರೆ ಶ್ರೀಲಂಕಾ ಎದುರು ತೋರಿದ ಹೋರಾಟ ಗಮನಸೆಳೆದಿತ್ತು. ಬ್ಯಾಟಿಂಗ್‌ ವಿಭಾಗ ಈ ತಂಡದ ಸಮಸ್ಯೆ. ಆಡಿರುವ  ನಾಲ್ಕು ಪಂದ್ಯಗಳಲ್ಲಿ ಒಮ್ಮೆಯೂ ಈ ತಂಡ 40 ಓವರ್‌ಗಳಿಗಿಂತ ಹೆಚ್ಚು ಬ್ಯಾಟ್‌ ಮಾಡಲು ಶಕ್ತವಾಗಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !