ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಂ ಇಂಡಿಯಾ ಬೌಲಿಂಗ್‌ ಬಲ; ವೆಸ್ಟ್ ಇಂಡೀಸ್‌ ಎದುರು 125 ರನ್‌ ಭರ್ಜರಿ ಜಯ 

ವಿಶ್ವಕಪ್‌ ಕ್ರಿಕೆಟ್‌
Last Updated 27 ಜೂನ್ 2019, 17:44 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಮತ್ತೆ ಮಿಂಚಿದ ಮೊಹಮ್ಮದ್‌ ಶಮಿ ಮತ್ತು ಬೂಮ್ರಾ ದಾಳಿಗೆ ಕೆರೀಬಿಯನ್‌ ಬ್ಯಾಟಿಂಗ್‌ ಕೊಂಡಿ ಬಹುಬೇಗ ಕಳಚಿಬಿತ್ತು. ಸ್ಪಿನ್ನರ್‌ಗಳೂ ಸಹ ವಿಕೆಟ್‌ ಕಬಳಿಸುವ ಮೂಲಕ ಟೀಂ ಇಂಡಿಯಾ ಬೌಲಿಂಗ್‌ ಬಲವನ್ನು ಮತ್ತೆ ಸಾಬೀತು ಪಡಿಸಿದರು. ಭಾರತ 125ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಕ್ಷಣಕ್ಷಣದ ಸ್ಕೋರ್‌:https://bit.ly/31VGjP9

ಶಮಿ 6.2 ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ 4 ವಿಕೆಟ್‌ ಪಡೆದರು. ಆರಂಭ ಹಾಗೂಕೊನೆಯ ವಿಕೆಟ್‌ಸಹ ಶಮಿ ಉರುಳಿಸಿದ್ದು ಈ ಪಂದ್ಯ ವಿಶೇಷ.

25 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 101 ರನ್‌ ಗಳಿಸಿದ್ದ ಕೆರೀಬಿಯನ್ನರು 34.2 ಓವರ್‌ಗಳಲ್ಲಿ 143 ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಯಿತು. ಈ ಮೂಲಕ ವಿಂಡೀಸ್‌ ಸೆಮಿ ಫೈನಲ್‌ ಪ್ರವೇಶಿಸಲು ಇದ್ದ ಕೊನೆಯ ಅವಕಾಶವೂ ದೂರವಾಯಿತು. ಇದೀಗ ವೆಸ್ಟ್‌ ಇಂಡೀಸ್ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಿಂದ ಹೊರಗುಳಿದಂತಾಗಿದೆ. ಐದು ಪಂದ್ಯಗಳಲ್ಲಿ ಗೆಲುವ ಕಂಡಿರುವ ಭಾರತ ಒಟ್ಟು 11 ಪಾಯಿಂಟ್‌ಗಳಿಂದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಭಾರತ ನೀಡಿದ 269 ರನ್‌ ಗುರಿಯ ಬೆನ್ನೇರಿದ ವೆಸ್ಟ್ ಇಂಡೀಸ್‌ 10 ರನ್‌ ಗಳಿಸುವಷ್ಟರಲ್ಲಿ ಕ್ರಿಸ್‌ ಗೇಲ್‌ ವಿಕೆಟ್‌ ಕಳೆದುಕೊಂಡಿತು. ಗೇಲ್‌ ವಿಕೆಟ್‌ ಕಬಳಿಸುವ ಮೂಲಕ ಖಾತೆ ತೆರೆದ ಮೊಹಮ್ಮದ್‌ ಶಮಿ, ಬಹುಬೇಗ ಶಾಯ್‌ ಹೋಪ್‌ ಆಟಕ್ಕೆ ನಿಯಂತ್ರಕ್ಕೆ ಹಾಕಿದರು. 5 ರನ್‌ ಗಳಿಸಿದ್ದ ಹೋಪ್‌ ಆಟ ಮುಗಿಸಿದರು.

100 ರನ್‌ ದಾಟುವ ಮುನ್ನವೇ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜಸ್‌ಪ್ರೀತ್‌ ಬೂಮ್ರಾ ಭಾರೀ ಆಘಾತ ನೀಡಿದರು. ಮೇಡಿನ್‌ ಓವರ್‌ನೊಂದಿಗೆ ಎರಡು ವಿಕೆಟ್ ಉರುಳಿಸಿದರು. ಮುಂದೆ ಚಾಹಲ್‌ ಆಟ ನಡೆಯಿತು. ಶಮಿ 4 ವಿಕೆಟ್‌, ಬೂಮ್ರಾ ಮತ್ತು ಚಾಹಲ್‌ ತಲಾ 2 ವಿಕೆಟ್‌ ಹಾಗೂ ಹಾರ್ದಿಕ್‌ ಪಾಂಡ್ಯ ಮತ್ತು ಕುಲದೀಪ್‌ ಯಾದವ್‌ ತಲಾ 1 ವಿಕೆಟ್‌ ಪಡೆದರು.

ಗುರುವಾರ ಐಸಿಸಿ ರ್‍ಯಾಂಕಿಂಗ್‌ ಪ್ರಕಟಗೊಂಡಿದ್ದು,ಭಾರತ ಏಕದಿನ ಪಂದ್ಯಗಳ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ವೆಸ್ಟ್ ಇಂಡೀಸ್‌ ಎದುರಿನ ಪಂದ್ಯದಲ್ಲಿಯೇ ವಿರಾಟ್‌ ಕೊಹ್ಲಿ ಅತಿ ವೇಗದ 20 ಸಾವಿರ ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು.

ಕೊಹ್ಲಿ ಅರ್ಧ ಶತಕ(72),ಮಹೇಂದ್ರ ಸಿಂಗ್‌ ಧೋನಿ(56) ಮತ್ತು ಹಾರ್ದಿಕ್‌ ಪಾಂಡ್ಯ(46; 38 ಎಸೆತ) ಉತ್ತಮ ಜತೆಯಾಟ ಹಾಗೂ ಕೆ.ಎಲ್‌.ರಾಹುಲ್‌(48) ನಡೆಸಿದ ತಾಳ್ಮೆಯ ಆಟದ ಪರಿಣಾಮ ಆರಂಭಿಕ ಆಘಾತವನ್ನು ಮೀರಿ ತಂಡ ಉತ್ತಮ ರನ್‌ ಗಳಿಸಲು ಶಕ್ತವಾಯಿತು.

ವಿಜಯ್‌ಶಂಕರ್‌(14), ಕೇದರ್‌ ಜಾದವ್‌(7) ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಮತ್ತೊಮ್ಮೆ ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕೊರತೆ ಉಂಟಾದಂತೆ ತೋರುತ್ತಿದೆ.ವೆಸ್ಟ್ ಇಂಡೀಸ್ ಪರ ಜೇಸನ್‌ ಹೋಲ್ಡರ್‌ ಮತ್ತುಶೆಲ್ಡನ್‌ ಕಾಟ್ರೆಲ್‌ ತಲಾ 2 ವಿಕೆಟ್‌ ಹಾಗೂ ಕೆಮರ್‌ ರೋಚ್‌ 3 ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT