ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಅಭ್ಯಾಸಕ್ಕೆ ಮಳೆಯ ಸ್ವಾಗತ

ವಿಶ್ವಕಪ್‌ ಕ್ರಿಕೆಟ್‌
Last Updated 7 ಜೂನ್ 2019, 11:25 IST
ಅಕ್ಷರ ಗಾತ್ರ

ಲಂಡನ್‌: ವಿಶ್ವಕಪ್‌ನ ಮುಂದಿನ ಪಂದ್ಯವನ್ನು ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಬೇಕಾಗಿರುವ ಭಾರತ ತಂಡದ ಸಿದ್ಧತೆಗೆ ಮಳೆ ತೊಡಕುಂಟುಮಾಡಿತು. ಲಂಡನ್‌ನಲ್ಲಿ ಶುಕ್ರವಾರ ಭಾರತ ತಂಡದವರ ನೆಟ್‌ ಪ್ರಾಕ್ಟೀಸ್‌ ಮಳೆಯಿಂದಾಗಿ ರದ್ದಾಯಿತು.

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಭಾರತ ಭಾನುವಾರ ವಿಶ್ವಕಪ್‌ನಲ್ಲಿ ತನ್ನ ಎರಡನೇ ಪಂದ್ಯ ಆಡಲಿದೆ.

ಬುಧವಾರ ದಕ್ಷಿಣ ಆಫ್ರಿಕ ವಿರುದ್ಧ ಆರು ವಿಕೆಟ್‌ಗಳಿಂದ ಮೊದಲ ಪಂದ್ಯ ಗೆದ್ದುಕೊಂಡಿದ್ದ ಭಾರತ ಗುರುವಾರ ಸೌತಾಂಪ್ಟನ್‌ನಿಂದ ಲಂಡನ್‌ಗೆ ಪ್ರಯಾಣಿಸಿತ್ತು. ಭಾರತ ತಂಡಕ್ಕೆ ಈಗ ಅಭ್ಯಾಸಕ್ಕೆ ಒಂದು ದಿನ ಮಾತ್ರ ಉಳಿದಿದೆ.

ಆಸ್ಟ್ರೇಲಿಯಾ ನಿರಂತರವಾಗಿ ಹತ್ತು ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾರತ ಪ್ರವಾಸದ ವೇಳೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0–2 ಹಿನ್ನಡೆಯಿಂದ ಚೇತರಿಸಿಕೊಂಡ ಆಸೀಸ್‌ 3–2ರಲ್ಲಿ ಸರಣಿ ಗೆದ್ದುಕೊಂಡ ನಂತರ ಆಡಿದ ಎಲ್ಲ ಏಕದಿನ ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT