ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷೆಲ್‌ ಸ್ಟಾರ್ಕ್‌ ಮಿಂಚು: ಆಸ್ಟ್ರೇಲಿಯಾ ಜಯಭೇರಿ

ಮಂಕಾದ ಟ್ರೆಂಟ್ ಬೌಲ್ಟ್ ಐತಿಹಾಸಿಕ ಹ್ಯಾಟ್ರಿಕ್‌ ಸಾಧನೆ
Last Updated 30 ಜೂನ್ 2019, 20:00 IST
ಅಕ್ಷರ ಗಾತ್ರ

ಲಂಡನ್‌: ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ ಕಲೆ ಹಾಕಿದ ಸಾಧಾರಣ ಮೊತ್ತ ಬೆನ್ನತ್ತುವಲ್ಲಿ ನ್ಯೂಜಿಲೆಂಡ್‌ ವಿಫಲವಾಯಿತು. 86 ರನ್‌ಗಳಿಂದ ಮಣಿದ ತಂಡದ ಅಗ್ರಕ್ರಮಾಂಕಕ್ಕೇರುವ ಆಸೆ ಕಮರಿತು.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ವಿಕೆಟ್‌ ಗಳನ್ನು ಕಳೆದುಕೊಂಡಿತು. ಫರ್ಗ್ಯುಸನ್, ಟ್ರೆಂಟ್‌ ಬೌಲ್ಟ್ ಮತ್ತು ಜಿಮ್ಮಿ ನೀಶಮ್ ದಾಳಿಗೆ ನಲುಗಿದ ತಂಡ 92 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದು ಕೊಂಡಿತು. ನಂತರ ಉಸ್ಮಾನ್‌ ಖ್ವಾಜಾ ಮತ್ತು ಅಲೆಕ್ಸ್ ಕ್ಯಾರಿ ಅವರ ಉತ್ತಮ ಜೊತೆಯಾಟದಿಂದಾಗಿ 243 ರನ್ ಗಳಿಸಿತು. ಬೌಲ್ಟ್ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್‌ ಗಳಿಸಿ ಮಿಂಚಿದರು. ಈ ಮೂಲಕ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮೊದಲ ಬೌಲರ್ ಎನಿಸಿದರು.

ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭದಿಂದಲೇ ಸಂಕಷ್ಟಕ್ಕೆ ಒಳಗಾಯಿತು. ಮಿಷೆಲ್‌ ಸ್ಟಾರ್ಕ್‌ 26 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಅವರ ಪರಿಣಾಮಕಾರಿ ದಾಳಿಯಿಂದಾಗಿ ನ್ಯೂಜಿಲೆಂಡ್‌ 43.4 ಓವರ್‌ಗಳಲ್ಲಿ 157 ರನ್‌ಗಳಿಗೆ ಕುಸಿಯಿತು.

ಈ ಪಂದ್ಯ ಗೆದ್ದರೆ ನ್ಯೂಜಿಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುತ್ತಿತ್ತು. ಸದ್ಯ ತಂಡ ಎಂಟು ಪಂದ್ಯಗಳಲ್ಲಿ 11 ಪಾಯಿಂಟ್ ಗಳಿಸಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT