ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಟೂರ್ನಿಯಲ್ಲಿ ಶತಕಗಳ ಸರದಾರ ರೋಹಿತ್‌; ದಾಖಲೆಗಳ ಮಳೆ

ವಿಶ್ವಕಪ್‌ ಕ್ರಿಕೆಟ್
Last Updated 2 ಜುಲೈ 2019, 14:15 IST
ಅಕ್ಷರ ಗಾತ್ರ

ಬರ್ಮಿಂಗಂ, ಎಜ್‌ಬಾಸ್ಟನ್‌: ಭಾನುವಾರ ಇದೇ ಕ್ರೀಡಾಂಗಣದಲ್ಲಿ 102 ರನ್‌ ಗಳಿಸುವ ಮೂಲಕ 25 ಶತಕಗಳನ್ನು ಪೂರೈಸಿದ್ದ ರೋಹಿತ್‌ ಶರ್ಮಾ, ಬಾಂಗ್ಲಾ ಎದುರಿನ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಹಾಗೂ ಒಟ್ಟು ನಾಲ್ಕನೇ ಬಾರಿ 100 ರನ್‌ ಗಡಿ ದಾಟಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದು 26ನೇ ಶತಕವಾಗಿದೆ.

ವಿಶ್ವಕಪ್‌ ಟೂರ್ನಿಯಲ್ಲಿ ನಾಲ್ಕು ಶತಕಗಳ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಹಾಗೂ ವಿಶ್ವಕಪ್‌ ಇತಿಹಾಸದಲ್ಲಿಯೇ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್‌ ಪಾತ್ರರಾದರು. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 2015ರಲ್ಲಿ ಈ ಸಾಧನೆ ದಾಖಲಿಸಿದ್ದರು.

ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ 2003ರ ವಿಶ್ವಕಪ್‌ ಟೂರ್ನಿಯಲ್ಲಿ ಮೂರು ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆಯನ್ನೂ ರೋಹಿತ್‌ ಮಾಡಿದ್ದಾರೆ. ಒಟ್ಟು 544 ರನ್‌ ಕಲೆ ಹಾಕಿದ್ದಾರೆ. ಹಾಗೇ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 359 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಯೂ ಸೃಷ್ಟಿಯಾಗಿದೆ. ಮಹೇಂದ್ರ ಸಿಂಗ್‌ ಧೋನಿ(358) ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ಹೊಂದಿದ್ದರು.

ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ಎದುರು 122, ಪಾಕಿಸ್ತಾನದ ಎದುರು 140, ಇಂಗ್ಲೆಂಡ್‌ ವಿರುದ್ಧ 102 ಹಾಗೂ ಬಾಂಗ್ಲಾದೇಶದ ಎದುರು 104 ರನ್‌ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT