ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕೀಬ್‌ ಶತಕ, ಲಿಟನ್‌ ಭರ್ಜರಿ ಬ್ಯಾಟಿಂಗ್‌; ವಿಂಡೀಸ್‌ ವಿರುದ್ಧ ಗೆದ್ದ ಬಾಂಗ್ಲಾ

ವಿಶ್ವಕಪ್‌ ಕ್ರಿಕೆಟ್‌
Last Updated 17 ಜೂನ್ 2019, 17:41 IST
ಅಕ್ಷರ ಗಾತ್ರ

ಟಾಂಟನ್‌:ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಬಾಂಗ್ಲಾದೇಶ ಏಳು ವಿಕೆಟ್‌ ಗೆಲುವು ಸಾಧಿಸಿದೆ.

ಬಾಂಗ್ಲಾ ಎದುರು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್‌ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 321 ರನ್‌ ಗಳಿಸಿತ್ತು.

322 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ್ದ ಬಾಂಗ್ಲಾ ಪಡೆಶಕೀಬ್‌ ಅಲ್‌ ಹಸನ್‌ ಶತಕ (124*), ಲಿಟನ್‌ ದಾಸ್ (94) ಉತ್ತಮ ಜೊತೆಯಾಟದ ನೆರವಿನಿಂದ 41.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಕ್ಷಣಕ್ಷಣದ ಸ್ಕೋರ್‌:https://bit.ly/2XkCQtU

ತಮೀಮ್‌ ಇಕ್ಬಾಲ್‌ ಮತ್ತು ಸೌಮ್ಯ ಸರ್ಕಾರ್‌ ಜೋಡಿ ಅರ್ಧಶತಕದ ಜತೆಯಾಟ ಪೂರೈಸಿತು. 23 ಎಸೆತಗಳಲ್ಲಿ 29 ರನ್‌(2 ಸಿಕ್ಸರ್‌; 2 ಬೌಂಡರಿ) ಗಳಿಸಿದ್ದ ಸೌಮ್ಯ ಸರ್ಕಾರ್‌, ರಸೆಲ್‌ ಎಸೆತದಲ್ಲಿಕ್ಯಾಚ್‌ ನೀಡಿದರು. ಅರ್ಧ ಶತಕದ ಸಮೀಪದಲ್ಲಿದ್ದ ಆರಂಭಿಕ ಆಟಗಾರ ತಮೀಮ್‌ ಇಕ್ಬಾಲ್‌(48) ರನ್‌ ಔಟ್‌ ಆದರು. ಶಕೀಬ್‌ ಜತೆಗೆ ಲಿಟನ್‌ ದಾಸ್ ಜತೆಗೂಡಿಗೆಲುವಿಗೆ ನಿರ್ಣಾಯಕ ಪಾತ್ರವಹಿಸಿದರು.

ಟಾಸ್‌ ಗೆದ್ದ ಬಾಂಗ್ಲಾ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌,ನಿಗದಿತ 50ಓವರ್‌ಗಳಲ್ಲಿ 8ವಿಕೆಟ್‌ ನಷ್ಟಕ್ಕೆ 321ರನ್‌ ಗಳಿಸಿತು.ಶಾಯ್‌ ಹೋಪ್‌ ಕೊನೆಯ ವರೆಗೂ ತಾಳ್ಮೆಯುತ ಆಟದ ಮೂಲಕ ತಂಡದ ರನ್‌ ಗಳಿಕೆಗೆ ಆಸರೆಯಾದರು. 121ಎಸೆತಗಳನ್ನು ಎದುರಿಸಿದ ಅವರುಶತಕದ ಹೊಸ್ತಿಲಲ್ಲಿ ಎಡವಿದರು.ಒಂದು ಸಿಕ್ಸರ್‌ ಮತ್ತು 4 ಬೌಂಡರಿ ಒಳಗೊಂಡ 96 ರನ್‌ ದಾಖಲಿಸಿದರು.

ಜೇಸನ್‌ ಹೋಲ್ಡರ್‌ ಕೇವಲ 15 ಎಸೆತಗಳಲ್ಲಿ33 ರನ್‌ ಹಾಗೂಶಿಮ್ರಾನ್‌ ಹೆಟ್ಮೆಯರ್‌ ಬಿರುಸಿನ ಆಟದವಾಡಿ 26 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು.ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ 13 ಎಸೆತಗಳನ್ನು ಎದುರಿಸಿ ಯಾವುದೇ ರನ್‌ ಗಳಿಸದೆಯೇ ಮೊಹಮ್ಮದ್‌ ಸೈಫುದ್ದೀನ್‌ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಎವಿನ್‌ ಲೂಯಿಸ್‌(70) ಮತ್ತು ಶಾಯ್‌ ಹೋಪ್‌ ಜೋಡಿ ತಾಳ್ಮೆಯುತ ಆಟದ ಮೂಲಕತಂಡದ ರನ್‌ ಗಳಿಕೆಗೆ ಆಸರೆಯಾಗಿದರು.

ಬಾಂಗ್ಲಾ ಪರಮುಸ್ತಫಿಜುರ್‌ ರಹಮಾನ್‌ 3 ವಿಕೆಟ್, ಶಕೀಬ್‌ ಅಲ್‌ ಹಸನ್‌ ಮತ್ತು ಮೊಹಮ್ಮದ್‌ ಸೈಫುದ್ದೀನ್‌ ತಲಾ 2 ವಿಕೆಟ್‌ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT