ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಪಂದ್ಯದಲ್ಲಿಯೇ 300 ದಾಟಿದ ಇಂಗ್ಲೆಂಡ್

ವಿಶ್ವಕಪ್ ಹೆಜ್ಜೆಗುರುತು - 3
Last Updated 15 ಏಪ್ರಿಲ್ 2019, 4:21 IST
ಅಕ್ಷರ ಗಾತ್ರ

ಜಗತ್ತಿಗೆ ಕ್ರಿಕೆಟ್ ಆಟವನ್ನು ಪರಿಚಯಿಸಿದ ದೇಶ ಇಂಗ್ಲೆಂಡ್. ಆದರೆ ಇದುವರೆಗೆ ಐಸಿಸಿ ಏಕದಿನ ವಿಶ್ವಕಪ್ ಅನ್ನು ಒಂದು ಬಾರಿಯೂ ಆ ದೇಶ ಗೆದ್ದಿಲ್ಲ. ಆದರೆ, ಮೊದಲ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ದೊಡ್ಡ ಸ್ಕೋರ್ ದಾಖಲೆ ಮಾಡಿದ ಶ್ರೇಯ ಗಳಿಸಿತು.

* ಟೂರ್ನಿಯ ದೊಡ್ಡ ಮೊತ್ತ ಇಂಗ್ಲೆಂಡ್: 4ಕ್ಕೆ 334 (60 ಓವರ್‌ಗಳಲ್ಲಿ) –ಭಾರತದ ವಿರುದ್ಧ.

* ದಾಖಲಾದ ಸಣ್ಣ ಮೊತ್ತ: ಶ್ರೀಲಂಕಾ: 86 (37.2 ಓವರ್‌ಗಳಲ್ಲಿ) ವೆಸ್ಟ್‌ ಇಂಡೀಸ್ ವಿರುದ್ಧ.

* ದೊಡ್ಡ ಜಯದ ಅಂತರ: ಇಂಗ್ಲೆಂಡ್‌ – 202 ರನ್ (ಭಾರತ ವಿರುದ್ಧದ ಪಂದ್ಯ)

* ಅತ್ಯಂತ ಕಡಿಮೆ ಅಂತರದ ಜಯ: ವೆಸ್ಟ್‌ ಇಂಡೀಸ್‌ಗೆ 17 ರನ್‌ಗಳು (ಆಸ್ಟ್ರೇಲಿಯಾ ಎದುರು)

* ಹೆಚ್ಚು ಶತಕಗಳನ್ನು ಗಳಿಸಿದವರು: ಗ್ಲೆನ್ ಟರ್ನರ್ (ನ್ಯೂಜಿಲೆಂಡ್) –02

* ಹೆಚ್ಚು ರನ್‌ಗಳನ್ನು ಗಳಿಸಿದವರು: ಗ್ಲೆನ್ ಟರ್ನರ್ (ನ್ಯೂಜಿಲೆಂಡ್) –333

* ಹೆಚ್ಚು ಅರ್ಧಶತಕ ಬಾರಿಸಿದವರು: ಮಜೀದ್ ಖಾನ್ (ಪಾಕಿಸ್ತಾನ) –03

* ಟೂರ್ನಿಯಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳು: 28

* ಅತಿ ಹೆಚ್ಚು ಸಿಕ್ಸರ್ ದಾಖಲಿಸಿದ್ದು: ಕ್ರಿಸ್ ಓಲ್ಡ್ (ಇಂಗ್ಲೆಂಡ್) –03

* ಶ್ರೇಷ್ಠ ಜೊತೆಯಾಟ: ಮ್ಹಾಕ್‌ಕಾಸ್ಕರ್–ಆ್ಯಷ್ಟನ್ ಟರ್ನರ್ (ಆಸ್ಟ್ರೇಲಿಯಾ) –182 ರನ್ ; ಶ್ರೀಲಂಕಾ ವಿರುದ್ಧ.

* ಹೆಚ್ಚು ವಿಕೆಟ್ ಗಳಿಸಿದವರು: ಗ್ಯಾರಿ ಗಿಲ್ಮೋರ್ (ಆಸ್ಟ್ರೇಲಿಯಾ; ಎಡಗೈ ವೇಗಿ) –11

* ಐದು ವಿಕೆಟ್ ಗೊಂಚಲು ಸಾಧನೆ ಮಾಡಿದವರು: ಗ್ಯಾರಿ ಗಿಲ್ಮೋರ್ ಮತ್ತು ಡೆನಿಸ್‌ ಲಿಲ್ಲಿ (ಇಬ್ಬರೂ ಆಸ್ಟ್ರೇಲಿಯಾದವರು).

* ಅತಿ ಹೆಚ್ಚು ಕ್ಯಾಚ್ ಪಡೆದವರು: ವೆಸ್ಟ್‌ ಇಂಡೀಸ್‌ನ ಕ್ಲೈವ್‌ ಲಾಯ್ಡ್ (04)

* ಹೆಚ್ಚು ಬಲಿ ಪಡೆದ ವಿಕೆಟ್‌ ಕೀಪರ್: ರಾಡ್ನಿ ಮಾರ್ಷ್ (ಆಸ್ಟ್ರೇಲಿಯಾ) –10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT