ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011 ವಿಶ್ವಕಪ್: ಧೋನಿ ಸಾಧನೆಯ ಉತ್ತುಂಗ ಸಮಯ

Last Updated 21 ಮೇ 2019, 19:43 IST
ಅಕ್ಷರ ಗಾತ್ರ

1983ರಲ್ಲಿ ಭಾರತ ತಂಡವು ವಿಶ್ವಕಪ್ ಗೆದ್ದಾಗ ವೆಸ್ಟ್ ಇಂಡೀಸ್ ಪ್ರಾಬಲ್ಯ ಮುರಿದು ಬಿದ್ದತ್ತು. ಸತತ ಮೂರು ಬಾರಿ ಕಪ್ ಜಯಿಸಿದ್ದ ಆಸ್ಟ್ರೇಲಿಯಾ ತಂಡದ ಠೇಂಕಾರಕ್ಕೆ 2011ರಲ್ಲಿ ತಡೆಯೊಡ್ಡಿದ್ದು ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡ.

28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಸಂಭ್ರಮ ತಂದ ವರ್ಷ ಅದಾಗಿತ್ತು. ಕಪಿಲ್ ದೇವ್ ನಂತರ ಅತ್ಯಂತ ಸಮರ್ಥ ನಾಯಕ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು. 2007ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹೀನಾಯ ಸೋಲು ಅನುಭವಿಸಿತ್ತು. ಅದರ ನಂತರ ನಡೆದಿದ್ದ ಕ್ಷಿಪ್ರ ಬದಲಾವಣೆಯಲ್ಲಿ ಧೋನಿ ನಾಯಕತ್ವ ವಹಿಸಿಕೊಂಡಿದ್ದರು.

ಅದೇ ವರ್ಷ ಅವರ ಬಳಗವು ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಟ್ವೆಂಟಿ–20 ವಿಶ್ವ ಚಾಂಪಿಯನ್‌ ಷಿಪ್ ಗೆದ್ದಿತ್ತು. ನಂತರ ಮೂರು ವರ್ಷಗಳಲ್ಲಿ ಮೂರು ಮಾದರಿಗಳ ಕ್ರಿಕಟ್‌ನಲ್ಲಿಯೂ ಭಾರತವು ಉತ್ತಮ ಸಾಧನೆ ಮಾಡಿತ್ತು. ಅದರಿಂದಾಗಿ ಧೋನಿ ಬಳಗದ ಮೇಲೆ ಇಡೀ ದೇಶದ ನಿರೀಕ್ಷೆ ಇತ್ತು. ಅದು ಹುಸಿಯಾಗಲಿಲ್ಲ.

ಆತಿಥೇಯ ದೇಶದ ತಂಡವು ಮೊದಲ ಬಾರಿಗೆ ವಿಶ್ವ ಚಾಂಪಿ ಯನ್ ಆದ ಅಪರೂಪದ ದಾಖಲೆಯನ್ನೂ ಭಾರತ ತಂಡ ಬರೆಯಿತು. ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳೂ ಸಹ ಆತಿಥ್ಯ ವಹಿಸಿದ್ದವು.

*ಅವಧಿ: ಫೆಬ್ರುವರಿ 19 ರಿಂದ ಏಪ್ರಿಲ್ 2

* ತಂಡಗಳು: 14 l ಪಂದ್ಯಗಳು: 49

* ಪ್ರೇಕ್ಷಕರ ಹಾಜರಿ: 12,29,826

* ಆತಿಥ್ಯ: ಭಾರತ

* ಚಾಂಪಿಯನ್: ಭಾರತ

* ರನ್ನರ್‌ ಅಪ್: ಶ್ರೀಲಂಕಾ

* ಸರಣಿಶ್ರೇಷ್ಠ: ಯುವರಾಜ್ ಸಿಂಗ್

* ಹೆಚ್ಚು ರನ್‌ ಗಳಿಸಿದವರು: ತಿಲಕರತ್ನೆ ದಿಲ್ಶಾನ್, ಶ್ರೀಲಂಕಾ (500)

* ಹೆಚ್ಚು ವಿಕೆಟ್ ಗಳಿಸಿದವರು: ಜಹೀರ್ ಖಾನ್, ಭಾರತ (21), ಶಾಹೀದ್ ಆಫ್ರಿದಿ, ಪಾಕಿಸ್ತಾನ (21)

* ಭಾರತೀಯ ಅಂಪೈರ್‌ಗಳು: ಶಾವೀರ್ ತಾರಾಪುರ್,ಅಮೀಷ್ ಸಾಹೆಬಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT