ಮೊದಲ ಎಸೆತ ಹಾಕಿದ್ದು ಭಾರತೀಯ!

ಶನಿವಾರ, ಏಪ್ರಿಲ್ 20, 2019
26 °C
ವಿಶ್ವಕಪ್ ಹೆಜ್ಜೆಗುರುತು - 2

ಮೊದಲ ಎಸೆತ ಹಾಕಿದ್ದು ಭಾರತೀಯ!

Published:
Updated:

ವಿಶ್ವಕಪ್ ಕ್ರಿಕೆಟ್ ಇತಿಹಾಸದ ಮೊದಲ ಎರಡು ಟೂರ್ನಿಗಳಲ್ಲಿ ಭಾರತ ತಂಡವು ಕಪ್ ಗೆದ್ದಿರಲಿಲ್ಲ. ಕಪ್ಪುಕುದುರೆಯಾಗಿಯೇ ಕಣಕ್ಕಿಳಿದಿತ್ತು. ಆದರೆ, ಭಾರತೀಯರು ಹೆಮ್ಮೆಪಡುವಂತಹ ಸುಂದರ ಕ್ಷಣಗಳು ಇತಿಹಾಸದ ಪುಟಗಳಲ್ಲಿವೆ. ಕನ್ನಡಿಗರ ಛಾಪು ಕೂಡ ಇದೆ. ಭಾರತವು ಲೀಗ್ ಹಂತದಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಿತ್ತು.

* ಲಾರ್ಡ್ಸ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಎದುರು ಭಾರತ ಆಡಿತ್ತು. ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. 202 ರನ್‌ಗಳಿಂದ ಗೆದ್ದಿತು.

* ಆಫ್‌ ಸ್ಪಿನ್ನರ್ ಎಸ್‌. ವೆಂಕಟರಾಘವನ್ ಅವರು ಭಾರತ ತಂಡದ ನಾಯಕತ್ವ ವಹಿಸಿದ್ದರು.

* ಮೊದಲ ಎಸೆತ ಹಾಕಿದ ಬೌಲರ್‌ ಭಾರತದ ಮಧ್ಯಮವೇಗಿ ಮದನ್‌ ಲಾಲ್. ಆ ಎಸೆತವನ್ನು ಎದುರಿಸಿದ ಬ್ಯಾಟ್ಸ್‌ಮನ್ ಜೆ.ಎ. ಜೇಮ್ಸನ್‌.

* ಜೆಮ್ಸನ್ ಅವರ ವಿಕೆಟ್‌ ಅನ್ನು ಮೊಹಿಂದರ್ ಅಮರನಾಥ್ ಗಳಿಸಿದರು. ಆ ಮೂಲಕ ಮೊದಲ ವಿಕೆಟ್ ಪಡೆದ ಶ್ರೇಯ ಅವರದ್ದು. ಕ್ಯಾಚ್ ಪಡೆದ ಹೆಗ್ಗಳಿಕೆ ವೆಂಕಟರಾಘವನ್ ಅವರದ್ದಾಗಿದೆ.

* ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದ ಸುನಿಲ್ ಗಾವಸ್ಕರ್ ಮೊದಲ ಎಸೆತ ಎದುರಿಸಿದ ಭಾರತದ ಬ್ಯಾಟ್ಸ್‌ಮನ್. ಅವರು ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲಿದ್ದರು. 174 ಎಸೆತಗಳಲ್ಲಿ ಔಟಾಗದೆ 36 ರನ್‌ ಗಳಿಸಿದ್ದರು.

* ಜಿ.ಆರ್. ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಮೊದಲ ಟೂರ್ನಿಯಲ್ಲಿ ಆಡಿದ ಕರ್ನಾಟಕದ ಇಬ್ಬರು ಆಟಗಾರರು

* ಮೊಹಿಂದರ್ ಅಮರನಾಥ್, ಅನ್ಷುಮನ್ ಗಾಯಕವಾಡ್ ಮತ್ತು ಕರ್ಸನ್ ಘಾವ್ರಿ ಅವರು ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು.

* ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು ಪೂರ್ವ ಆಫ್ರಿಕಾ ಎದುರು 10 ವಿಕೆಟ್‌ಗಳಿಂದ ಗೆದ್ದಿತ್ತು. ಗಾವಸ್ಕರ್ (ಔಟಾಗದೆ 65 ) ಮತ್ತು ಫರೂಕ್ ಎಂಜಿನಿಯರ್ (ಔಟಾಗದೆ 54) ಅರ್ಧಶತಕ ಗಳಿಸಿದ್ದರು. ಮದನ್ ಲಾಲ್ ಮೂರು ವಿಕೆಟ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತವು ಸೋಲನುಭವಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !