ಕ್ಲೈವ್‌ ಲಾಯ್ಡ್‌ ಬಳಗದ ತಲೆಗೆ ಕಿರೀಟ

ಶನಿವಾರ, ಏಪ್ರಿಲ್ 20, 2019
27 °C
ವಿಶ್ವ ಕಪ್ ಹೆಜ್ಜೆಗುರುತು - 4

ಕ್ಲೈವ್‌ ಲಾಯ್ಡ್‌ ಬಳಗದ ತಲೆಗೆ ಕಿರೀಟ

Published:
Updated:

ಆ ದಿನ ಜೂನ್ 21. ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಮೊಟ್ಟಮೊದಲ ವಿಶ್ವಕಪ್ ಟೂರ್ನಿಯ ಫೈನಲ್ ನಡೆಯಿತು. 60ರ ದಶಕದ ಆರಂಭದಿಂದಲೂ ಟೆಸ್ಟ್ ಮತ್ತು ನಿಗದಿಯ ಓವರ್‌ಗಳಲ್ಲಿ ಅನಭಿಷಿಕ್ತ ದೊರೆಯಾಗಿದ್ದ ವೆಸ್ಟ್ ಇಂಡೀಸ್ ತಂಡವು ಮೊದಲ ವಿಶ್ವ ಚಾಂಪಿಯನ್ ಆಯಿತು. ಕ್ಲೈವ್‌ ಲಾಯ್ಡ್ ನಾಯಕತ್ವದ ಬಳಗವು ಟ್ರೋಫಿ ಎತ್ತಿ ಹಿಡಿಯಿತು. 17 ರನ್‌ಗಳಿಂದ ಸೋತ ಇಯಾನ್ ಚಾಪೆಲ್ ನಾಯಕತ್ವದ ಆಸ್ಟ್ರೇಲಿಯಾ ರನ್ನರ್ಸ್ ಅಪ್ ಆಯಿತು.  ಮೊದಲ ವಿಶ್ವಕಪ್ ಟೂರ್ನಿ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿತ್ತು. ಫೈನಲ್ ಪಂದ್ಯದ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ಪಂದ್ಯದಲ್ಲಿ ಕೊನೆಯವರಾಗಿ ಆಸ್ಟ್ರೇಲಿಯಾದ ಜೆಫ್ ಥಾಮ್ಸನ್ ಔಟಾಗುತ್ತಿದ್ದಂತೆಯೇ ಗ್ಯಾಲರಿಯಲ್ಲಿ ಕಿಕ್ಕಿರಿದಿದ್ದ ಜನರು ಮೈದಾನದೊಳಕ್ಕೆ ನುಗ್ಗಿದರು. ಆಟಗಾರರು ಪೆವಿಲಿಯನ್ ಸೇರಲು ಹರಸಾಹಸಪಡಬೇಕಾಗಿತ್ತು. ಈಗಿನಷ್ಟು ಆಗ ಭದ್ರತೆ ಮತ್ತೊಂದು ಇರಲಿಲ್ಲ. ಆದರೆ, ಅಲ್ಲಿಯ ಜನರು ಗೆದ್ದವರು ತಮ್ಮ ದೇಶದವರಲ್ಲದಿದ್ದರೂ ಎತ್ತಿ ಕೊಂಡಾಡಿದ್ದು ಗಮನಾರ್ಹ. ಈ ಪಂದ್ಯದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

* ಆಸ್ಟ್ಟೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

* ಸೆಮಿಫೈನಲ್ ಸೇರಿದಂತೆ ಎಲ್ಲ ಐದು ಪಂದ್ಯಗಳಲ್ಲಿಯೂ ಗೆದ್ದಿದ್ದ ವಿಂಡೀಸ್‌ ಫೈನಲ್‌ನಲ್ಲಿ 50 ಓವರ್‌ಗಳಲ್ಲಿ 8ಕ್ಕೆ 291 ರನ್‌ ಗಳಿಸಿತು.

* ಆಸ್ಟ್ರೇಲಿಯಾ ತಂಡವು 54.4 ಓವರ್‌ಗಳಲ್ಲಿ 274 ರನ್‌ ಗಳಿಸಿತು.

*  ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್‌ ಶತಕ (102; 85ಎಸೆತ, 12ಬೌಂಡರಿ, 2ಸಿಕ್ಸರ್) ಗಳಿಸಿದರು.

* ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ರೋಹನ್ ಕನಯ್ (55; 105ಎ, 8ಬೌಂಡರಿ) ಮತ್ತು ಲಾಯ್ಡ್‌ 149 ರನ್‌ ಸೇರಿಸಿದರು.

* ಆಸ್ಟ್ರೇಲಿಯಾದ ಗ್ಯಾರಿ ಘಿಲ್ಮೋರ್ ಐದು ವಿಕೆಟ್ ಗಳಿಸಿದರು.

* ಆಸ್ಟ್ರೇಲಿಯಾ ನಾಯಕ ಇಯಾನ್ ಚಾಪೆಲ್ ಅರ್ಧಶತಕ (62 ರನ್) ಗಳಿಸಿದರು.

* ವಿಂಡೀಸ್ ವೇಗಿ ಕೀತ್ ಬೊಯ್ಸ್‌ ನಾಲ್ಕು ವಿಕೆಟ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

* ವಿಂಡೀಸ್ ತಂಡದಲ್ಲಿ ಆಗ  ವಿಶ್ವಪ್ರಸಿದ್ಧ ಆಟಗಾರರಾಗಿದ್ದ ಸರ್‌ ವಿವಿಯನ್ ರಿಚರ್ಡ್ಸ್, ಲ್ಯಾನ್ಸ್‌ ಗಿಬ್ಸ್, ಗಾರ್ಡನ್ ಗ್ರಿನಿಜ್ ಮತ್ತು ಲಾಯ್ಡ್ ಇದ್ದರು.

 (ಮುಂದುವರಿಯುವುದು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !