ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರ ಕೈ ಜಾರಿದ ಎರಡನೇ ಟ್ರೋಫಿಯ ಕನಸು

ವಿಶ್ವಕಪ್ ಹೆಜ್ಜೆಗುರುತು– 9
Last Updated 28 ಏಪ್ರಿಲ್ 2019, 17:17 IST
ಅಕ್ಷರ ಗಾತ್ರ

* ಲೀಗ್‌ ಹಂತದ ‘ಎ’ ಗುಂಪಿನಿಂದ ಭಾರತ, ಆಸ್ಟ್ರೇಲಿಯಾ, ‘ಬಿ’ ಗುಂಪಿನಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ತಂಡಗಳು ನಾಕೌಟ್‌ ತಲುಪಿದ್ದವು.

* ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನ. 4ರಂದು ಲಾಹೋರ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕಾಂಗರೂಗಳ ನಾಡಿನ ಪಡೆ 18 ರನ್‌ಗಳ ಗೆಲುವು ಸಾಧಿಸಿತ್ತು.

* ಪಾಕಿಸ್ತಾನದಲ್ಲಿ ನಡೆದ ನಾಕೌಟ್‌ ಪಂದ್ಯದಲ್ಲಿ ಮೊದಲ ಅರ್ಧಶತಕ ಗಳಿಸಿದ ಕೀರ್ತಿ ಡೇವಿಡ್‌ ಬೂನ್‌ (65 ರನ್‌) ಪಾಲಾಯಿತು.

* ಆಸ್ಟ್ರೇಲಿಯಾದ ಮೂವರು (ಸಿಮೊನ್‌ ಒಡಿನೆಲ್‌, ಚಾರ್ಲೆಸ್‌ ಡೇರ್‌ ಮತ್ತು ಟಿಮ್‌ ಮೇ) ಬ್ಯಾಟ್ಸ್‌ಮನ್‌ಗಳು ರನ್‌ ಖಾತೆ ತೆರದಿರಲಿಲ್ಲ.

* ಮುಂಬೈನಲ್ಲಿ ನವೆಂಬರ್ ಐದರಂದು ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ಪೈಪೋಟಿ ನಡೆಸಿದವು.ಇಂಗ್ಲೆಂಸ್ ತಂಡದಲ್ಲಿ ಹಿರಿಯ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇಂಗ್ಲೆಂಡ್ ತಂಡ 35 ರನ್‌ಗಳಿಂದ ಗೆದ್ದು, ಫೈನಲ್‌ ಪ್ರವೇಶಿಸಿದರೆ, ಭಾರತ ನಿರಾಸೆ ಅನುಭವಿಸಿತು.

* ಇಂಗ್ಲೆಂಡ್ ತಂಡದ ನಾಯಕ ಗ್ರಹಾಂ ಗೂಚ್ ಶತಕ ಗಳಿಸಿದ್ದರು

* ಉಪಖಂಡದಲ್ಲಿ ನಡೆದ ಚೊಚ್ಚಲ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮೊದಲು ಅರ್ಧಶತಕ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಅಜರುದ್ದೀನ್‌. ಅವರು 74 ಎಸೆತಗಳಲ್ಲಿ 64 ರನ್‌ ಕಲೆಹಾಕಿದ್ದರು.

* ಆರಂಭದಲ್ಲಿ ಉತ್ತಮವಾಗಿ ಆಡುತ್ತಿದ್ದ ಭಾರತ ತಂಡ ಕೊನೆಯ 51 ರನ್‌ ಕಲೆಹಾಕುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸೋತಿತು. ಇದರಲ್ಲಿ ಕಿರಣ್‌ ಮೋರೆ, ಮನೋಜ್‌ ಪ್ರಭಾಕರ್‌, ಚೇತನ್‌ ಶರ್ಮಾ ಮತ್ತು ಮಣಿಂದರ್‌ ಸಿಂಗ್‌ ಒಂದಂಕಿಯ ಮೊತ್ತ ಕೂಡ ದಾಟಿರಲಿಲ್ಲ.

* ಭಾರತ ಎದುರು ಸೆಮಿಫೈನಲ್‌ನಲ್ಲಿ ಗೆಲುವು ಪಡೆಯುವ ಮೂಲಕ ಇಂಗ್ಲೆಂಡ್‌ ತಂಡ 1983ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಹಿಂದಿನ ವಿಶ್ವಕಪ್‌ನ ನಾಲ್ಕರ ಘಟ್ಟದಲ್ಲಿ ಭಾರತ ತಂಡ ಇಂಗ್ಲೆಂಡ್‌ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ ತಲುಪಿತ್ತು.

* ಆರಂಭಿಕ ಬ್ಯಾಟ್ಸ್‌ಮನ್ ಸುನಿಲ್ ಗಾವಸ್ಕರ್ ಅವರಿಗೆ ಇದು ಕೊನೆಯ ಏಕದಿನ ಪಂದ್ಯವಾಯಿತು. ತಮ್ಮದೇ ತವರೂರಿನ ಅಂಗಳದಲ್ಲಿ ಅವರು ಮಿಂಚಲಿಲ್ಲ. ಅವರ ಮೇಲೆ ಇದ್ದ ನಿರೀಕ್ಷೆ ಹುಸಿಯಾಗಿತ್ತು. ಏಕೆಂದರೆ, ಸೆಮಿಫೈನಲ್‌ಗೂ ಮುನ್ನ ನಾಗಪುರದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಗಾವಸ್ಕರ್ ಶತಕ (103; 88 ಎಸೆತ, 10ಬೌಂಡರಿ, 3 ಸಿಕ್ಸರ್) ಬಾರಿಸಿದ್ದರು. ಗೆಲುವಿನ ರೂವಾರಿಯೂ ಆಗಿದ್ದರು. ಅದು ಅವರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿರುವ ಏಕೈಕ ಶತಕವೂ ಹೌದು. 108 ಏಕದಿನ ಪಂದ್ಯಗಳನ್ನು ಅವರು ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT