ಗಾವಸ್ಕರ್‌ ‘ತಾಳ್ಮೆಯ’ ಅರ್ಧಶತಕ

ಭಾನುವಾರ, ಏಪ್ರಿಲ್ 21, 2019
26 °C

ಗಾವಸ್ಕರ್‌ ‘ತಾಳ್ಮೆಯ’ ಅರ್ಧಶತಕ

Published:
Updated:

ಎರಡು ತಾಸು ಮತ್ತು 50 ನಿಮಿಷಗಳ ಸುದೀರ್ಘ ಕಾಲ ಕ್ರೀಸ್‌ನಲ್ಲೇ ಲಂಗರು. ಎದುರಿಸಿದ್ದು 144 ಎಸೆತ. ಗಳಿಸಿದ ರನ್ 55!

ನಿಧಾನಗತಿಯ ಬ್ಯಾಟಿಂಗ್‌ಗೆ ‘ಖ್ಯಾತಿ’ ಗಳಿಸಿರುವ ಸುನಿಲ್ ಗಾವಸ್ಕರ್‌ ಎರಡನೇ ವಿಶ್ವಕಪ್‌ನ ಭಾರತದ ಎರಡನೇ ಪಂದ್ಯದಲ್ಲಿ ಆಡಿದ ರೀತಿ ಇದು. ಮೊದಲ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 174 ಎಸೆತಗಳಲ್ಲಿ 36 ರನ್‌ ಗಳಿಸಿದ್ದ ಗಾವಸ್ಕರ್ ಈ ಪಂದ್ಯದಲ್ಲೂ ತಾಳ್ಮೆ ಪ್ರದರ್ಶಿಸಿದರು.

ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಗಾವಸ್ಕರ್‌ ಮೊದಲ ವಿಕೆಟ್‌ಗೆ ಅನ್ಶುಮನ್ ಗಾಯಕವಾಡ್‌ ಅವರೊಂದಿಗೆ 27 ರನ್ ಸೇರಿಸಿದ್ದರು. ದಿಲೀಪ್ ವೆಂಗ್‌ಸರ್ಕಾರ್‌, ಜಿ.ಆರ್.ವಿಶ್ವನಾಥ್‌, ಬ್ರಿಜೇಶ್ ಪಟೇಲ್‌ ಮತ್ತು ಕಪಿಲ್ ದೇವ್ ಅವರೊಂದಿಗೂ ಬ್ಯಾಟಿಂಗ್ ಮಾಡಿದ್ದರು. ರಿಚರ್ಡ್‌ ಹ್ಯಾಡ್ಲಿಗೆ ವಿಕೆಟ್ ಒಪ್ಪಿಸಿದ್ದರು.


1979ರ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಂಡಗಳು

* ಜೂನ್‌ 13ರಂದು ಲೀಡ್ಸ್‌ನಲ್ಲಿ ಭಾರತದ ಎರಡನೇ ಪಂದ್ಯ ನಡೆದಿತ್ತು. ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಭಾರತ 55.5 ಓವರ್‌ಗಳಲ್ಲಿ 182 ರನ್‌ ಗಳಿಸಿತ್ತು.
* ಗಾವಸ್ಕರ್‌ ಎರಡನೇ ವಿಕೆಟ್‌ಗೆ ವೆಂಗ್‌ಸರ್ಕಾರ್ ಜೊತೆ 11 ರನ್‌, ಮೂರನೇ ವಿಕೆಟ್‌ಗೆ ವಿಶ್ವನಾಥ್ ಜೊತೆ 15 ರನ್ ಸೇರಿಸಿದ್ದರು.
* 53 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಗಾವಸ್ಕರ್ ಜೊತೆಗೂಡಿದ ಬ್ರಿಜೇಶ್ ಪಟೇಲ್‌ 51 ರನ್ ಸೇರಿಸಿ ತಂಡದ ಮೊತ್ತವನ್ನು ಮೂರಂಕಿ ಗಡಿ ದಾಟಿಸಿದ್ದರು.
* ಕಪಿಲ್ ದೇವ್ ಜೊತೆ ಗಾವಸ್ಕರ್‌ ಆರನೇ ವಿಕೆಟ್‌ಗೆ 40 ರನ್ ಸೇರಿಸಿದ್ದರು. ಎಂಟನೇ ಕ್ರಮಾಂಕದ ಕರ್ಜನ್ ಘಾವ್ರಿ 20 ರನ್ ಗಳಿಸಿದ್ದರು. ಹೀಗಾಗಿ ತಂಡ 150 ರನ್‌ಗಳ ಗಡಿ ದಾಟಿತ್ತು.
* ಸುಲಭ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಆದರೆ ಇದಕ್ಕಾಗಿ 57 ಓವರ್‌ ತೆಗೆದುಕೊಂಡಿತ್ತು.
* ನ್ಯೂಜಿಲೆಂಡ್ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾನ್ ರೈಟ್ (48; 94 ಎಸೆತ, 1 ಬೌಂ) ಮತ್ತು ಬ್ರೂಸ್ ಎಡ್ಗರ್‌ (ಅಜೇಯ 84; 167 ಎ, 8 ಬೌಂ) ಶತಕದ (100 ರನ್‌) ಜೊತೆಯಾಟ ಆಡಿದ್ದರು. ಎಡ್ಗರ್ ಮತ್ತು ಗ್ಲೆನ್ ಟರ್ನರ್‌ (43; 76 ಎ, 6 ಬೌಂ) ಮೂರನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ಅಡಿ ಸುಲಭ ಜಯ ತಂದುಕೊಟ್ಟಿದ್ದರು.
* ಭಾರತದ ಪರ ಏಕೈಕ ವಿಕೆಟ್‌ ಗಳಿಸಿದವರು ಮಧ್ಯಮ ಕ್ರಮಾಂಕದ ಮೊಹಿಂದರ್ ಅಮರನಾಥ್‌. ಲ್ಯಾನ್ಸ್ ಕೇನ್ಸ್‌ ರನ್ ಔಟ್ ಆಗಿದ್ದರು.
* ಮೊಹಿಂದರ್‌ ಅಮರನಾಥ್‌, ಬಿಷ‌ನ್ ಸಿಂಗ್ ಬೇಡಿ ಮತ್ತು ಎಸ್‌.ವೆಂಕಟರಾಘವನ್‌ ತಲಾ 12 ಓವರ್ ಬೌಲಿಂಗ್ ಮಾಡಿದ್ದರು. ಕಪಿಲ್ ದೇವ್ 11 ಓವರ್ ಮತ್ತು ಘಾವ್ರಿ 10 ಓವರ್‌ ಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !