ವಿಶ್ವಕಪ್ ಕ್ರಿಕೆಟ್: 15ಕ್ಕೆ ಭಾರತ ತಂಡದ ಆಯ್ಕೆ

ಶುಕ್ರವಾರ, ಏಪ್ರಿಲ್ 26, 2019
35 °C

ವಿಶ್ವಕಪ್ ಕ್ರಿಕೆಟ್: 15ಕ್ಕೆ ಭಾರತ ತಂಡದ ಆಯ್ಕೆ

Published:
Updated:

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಇದೇ 15ರಂದು ಮುಂಬೈಯಲ್ಲಿ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ಸೋಮವಾರ ನಡೆದ ಆಡಳಿತಾಧಿಕಾರಿ (ಸಿಒಎ) ಮತ್ತು ಬಿಸಿಸಿಐ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವಕಪ್‌ಗೆ ತಂಡಗಳನ್ನು ಪ್ರಕಟಿಸಲು ಏಪ್ರಿಲ್‌ 23 ಕೊನೆಯ ದಿನವಾಗಿದ್ದು, ಎಂಟು ದಿನ ಮುಂಚಿತವಾಗಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ತೀರ್ಮಾನಿಸಿದೆ.

ಈ ಬಾರಿಯ ವಿಶ್ವಕಪ್‌, ಮೇ 30ರಿಂದ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !