ಹಾಶಿಂ , ಡುಪ್ಲೆಸಿ ಸೊಬಗಿನಾಟ

ಗುರುವಾರ , ಜೂನ್ 20, 2019
28 °C
ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ; ಲಕ್ಮಲ್‌, ಪ್ರದೀಪ್‌ಗೆ ತಲಾ ಎರಡು ವಿಕೆಟ್‌

ಹಾಶಿಂ , ಡುಪ್ಲೆಸಿ ಸೊಬಗಿನಾಟ

Published:
Updated:
Prajavani

ಕಾರ್ಡಿಫ್‌: ಆರಂಭಿಕ ಬ್ಯಾಟ್ಸ್‌ಮನ್ ಹಾಶಿಂ ಆಮ್ಲಾ (65; 61 ಎಸೆತ, 9 ಬೌಂಡರಿ) ಮತ್ತು ಮೂರನೇ ಕ್ರಮಾಂಕದ ಫಾಫ್ ಡು ಪ್ಲೆಸಿ (88; 69 ಎ, 4 ಸಿಕ್ಸರ್‌, 7 ಬೌಂಡರಿ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಭಾರಿ ಮೊತ್ತ ದಾಖಲಿಸಿತು.

ಇಲ್ಲಿ ಶುಕ್ರವಾರ ನಡೆದ ಶ್ರೀಲಂಕಾ ಎದುರಿನ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಇವರಿಬ್ಬರು ಎರಡನೇ ವಿಕೆಟ್‌ಗೆ ಸೇರಿಸಿದ 128 ರನ್‌ಗಳಿಂದಾಗಿ ತಂಡ ಏಳು ವಿಕೆಟ್‌ಗಳಿಗೆ 338 ರನ್‌ ಕಲೆ ಹಾಕಿತು.

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಮ್ಲಾ ಮತ್ತು ಏಡನ್ ಮರ್ಕರಮ್ ಮೊದಲ ವಿಕೆಟ್‌ಗೆ 47 ರನ್ ಸೇರಿಸಿದರು. ಸುರಂಗ ಲಕ್ಮಲ್ ಎಸೆತದಲ್ಲಿ ಮರ್ಕರಮ್ ಔಟಾದಾಗ ಲಂಕಾ ಪಾಳಯದಲ್ಲಿ ಸಂಭ್ರಮ ಮೂಡಿತು.

ಆದರೆ ಆಮ್ಲಾ ಜೊತೆಗೂಡಿದ ಪ್ಲೆಸಿ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದರು. ಭರ್ಜರಿ ಬ್ಯಾಟಿಂಗ್ ಮಾಡಿ ಪ್ಲೆಸಿ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಇವರಿಬ್ಬರ ಜೊತೆಯಾಟ 24ನೇ ಓವರ್‌ ವರೆಗೆ ಮುಂದುವರಿಯಿತು. ನಾಲ್ಕು ಎಸೆತಗಳ ಅಂತರದಲ್ಲಿ ಇವರಿಬ್ಬರೂ ವಾಪಸಾದರು.

ನಂತರ ಬಂದ ವ್ಯಾನ್ ಡೆರ್ ಡುಸೆನ್ ಕೂಡ ರನ್‌ಗಳನ್ನು ಕಲೆ ಹಾಕಿದರು. ಜೆ.ಪಿ.ಡುಮಿನಿ ಮತ್ತು ಪಿಶುವಾಯೊ ಅವರು ಡುಸೆನ್‌ಗೆ ಉತ್ತಮ ಸಹಕಾರ ನೀಡಿದರು. ಅಂತಿಮ ಓವರ್‌ಗಳಲ್ಲಿ ಕ್ರಿಸ್ ಮಾರಿಸ್ ಮಿಂಚಿದರು. ಅವರು 13 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 26 ರನ್‌ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 7ಕ್ಕೆ 338 (ಹಾಶಿಂ ಆಮ್ಲಾ 65, ಏಡಮ್ ಮರ್ಕರಮ್‌ 21, ಫಾಫ್ ಡು ಪ್ಲೆಸಿ 88, ವ್ಯಾನ್ ಡೆರ್ ಡುಸೆನ್ 40, ಜೆ.ಪಿ.ಡುಮಿನಿ 22, ಆ್ಯಂಡಿಲೆ ಪಿಶುವಾಯೊ 35, ಪ್ರೆಟೋರಿಯಸ್ ಅಜೇಯ 25, ಕ್ರಿಸ್ ಮಾರಿಸ್ ಅಜೇಯ 26; ಸುರಂಗ ಲಕ್ಮಲ್ 63ಕ್ಕೆ2, ನುವಾನ್ ಪ್ರದೀಪ್ 77ಕ್ಕೆ2, ಇಸರು ಉದಾನ 42ಕ್ಕೆ1, ಅಜಂತ ಮೆಂಡಿಸ್‌ 45ಕ್ಕೆ1, ಧನಂಜಯ ಡಿ ಸಿಲ್ವಾ 44ಕ್ಕೆ1). ಶ್ರೀಲಂಕಾ ಎದುರಿನ ಪಂದ್ಯ (ವಿವರ ಅಪೂರ್ಣ)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !