ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಅಂಪೈರ್‌ ಪ್ಯಾನೆಲ್‌ಗೆ ಅಲೀಂ ದಾರ್ ವಿದಾಯ

Last Updated 16 ಮಾರ್ಚ್ 2023, 20:10 IST
ಅಕ್ಷರ ಗಾತ್ರ

ಲಾಹೋರ್: ಸುದೀರ್ಘ ಕಾಲದಿಂದ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಪಾಕಿಸ್ತಾನದ ಅಲೀಂ ದಾರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಲೀಟ್ ಪ್ಯಾನಲ್‌ನಿಂದ ನಿವೃತ್ತರಾದರು. ಅವರ ಸ್ಥಾನಕ್ಕೆ ಪಾಕಿಸ್ತಾನದವರೇ ಆದ ಎಹಸಾನ್ ರಝಾ ನೇಮಕವಾಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ದಾರ್ ಅವರದ್ದಾಗಿದೆ.

ಅಲೀಂ ಅವರು 144 ಟೆಸ್ಟ್, 222 ಏಕದಿನ ಹಾಗೂ 69 ಟಿ20 ಪಂದ್ಯಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.

‘ಅಂಪೈರ್ ದಾರ್ ಅವರು ಎಲೀಟ್ ಅಂಪೈರ್‌ ಆಗಿ 19 ವರ್ಷಗಳ ದೀರ್ಘ ಕಾರ್ಯನಿರ್ವಹಣೆಯ ನಂತರ ವಿದಾಯ ಹೇಳಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಒಟ್ಟು 435 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು’ ಎಂದು ಐಸಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಐಸಿಸಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು ಗೌರವದ ಸಂಕೇತ. ದೀರ್ಘ ಕಾಲದವರೆಗೆ ವಿಶ್ವದ ಬೇರೆ ಬೇರೆ ತಾಣಗಳಲ್ಲಿ ಕೆಲಸ ಮಾಡಿದ್ದೇನೆ. ಇದು ಸಂತೃಪ್ತಿ ತಂದಿದೆ’ 58 ವರ್ಷದ ಅಲೀಂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT