ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್‌: ಬೌಂಡರಿ ಗೆರೆ 60 ಮೀ. ನಿಗದಿ

Last Updated 6 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯಗಳಿಗೆ ಕ್ರೀಡಾಂಗಣದ ಬೌಂಡರಿ ಗೆರೆಯ ಅಳತೆಯನ್ನು ಬಿಸಿಸಿಐ ಕಿರಿದಾಗಿಸಿದೆ.

ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣ ಮತ್ತು ಬ್ರೆಬೋರ್ನ್‌ ಕ್ರೀಡಾಂಗಣದ ಬೌಂಡರಿ ಗೆರೆಯ ಗರಿಷ್ಠ ಮಿತಿಯನ್ನು 60 ಮೀ.ಗಳಿಗೆ ನಿಗದಿಪಡಿಸಲಾಗಿದೆ. ಆಟಗಾರ್ತಿಯರಿಗೆ ಬೌಂಡರಿ, ಸಿಕ್ಸರ್‌ ಹೊಡೆಯುವುದು ಸುಲಭವಾಗಲಿ ಎಂಬುದು ಇದರ ಉದ್ದೇಶ. ಲೀಗ್‌ನ ಮೊದಲ ಎರಡು ಪಂದ್ಯಗಳಲ್ಲಿ ತಂಡಗಳು 200ಕ್ಕೂ ಅಧಿಕ ರನ್‌ಗಳನ್ನು ಗಳಿಸಲು ಇದೂ ಕಾರಣ.

ದಕ್ಷಿಣ ಆಫ್ರಿಕಾದಲ್ಲಿ ಈಚೆಗೆ ನಡೆದಿದ್ದ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಂಡರಿ ಗೆರೆಯನ್ನು 65 ಮೀ.ಗಳಿಗೆ ನಿಗದಿಪಡಿಸಲಾಗಿತ್ತು.

‘ಮಹಿಳಾ ಕ್ರಿಕೆಟ್‌ ಲೀಗ್‌ನ ಎಲ್ಲ ಪಂದ್ಯಗಳಿಗೆ ಬೌಂಡರಿ ಗೆರೆಯ ಗರಿಷ್ಠ ಮಿತಿಯನ್ನು 60 ಮೀ. ಗಳಿಗೆ ನಿಗದಿಪಡಿಸಬೇಕು ಎಂಬ ಸೂಚನೆ ಬಿಸಿಸಿಐನಿಂದ ಬಂದಿದೆ’ ಎಂದು ಮುಂಬೈ ಕ್ರಿಕೆಟ್‌ ಸಂಸ್ಥೆಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈಡ್‌, ನೋಬಾಲ್‌ಗೂ ಡಿಆರ್‌ಎಸ್‌: ವೈಡ್‌ ಮತ್ತು ನೋಬಾಲ್‌ಗೂ ಅಂಪೈರ್ ತೀರ್ಪು ಮರುಪರಿಶೀಲನೆ (ಡಿಆರ್‌ಎಸ್‌) ಪಡೆದುಕೊಳ್ಳುವ ಹೊಸ ನಿಯಮವನ್ನು ಡಬ್ಲ್ಯುಪಿಎಲ್‌ನಲ್ಲಿ ಅಳವ ಡಿಸಲಾಗಿದೆ. ವೈಡ್‌ ಮತ್ತು ನೋಬಾಲ್‌ಗೆ ಸಂಬಂಧಿಸಿದಂತೆ ಅಂಪೈರ್‌ ನೀಡುವ ತೀರ್ಪಿಗೆ ಅತೃಪ್ತಿಯಿದ್ದರೆ ಆಟಗಾರ್ತಿಯರಿಗೆ ಡಿಆರ್‌ಎಸ್‌ ಮೊರೆ ಹೋಗ ಬಹುದು. ಮುಂಬೈ ಇಂಡಿಯನ್ಸ್‌ ತಂಡದ ಹರ್ಮನ್‌ಪ್ರೀತ್‌ ಕೌರ್‌, ಡೆಲ್ಲಿ ಕ್ಯಾಪಿ ಟಲ್ಸ್‌ನ ಜೆಮಿಮಾ ರಾಡ್ರಿಗಸ್‌ ಮತ್ತು ಯುಪಿ ವಾರಿಯರ್ಸ್‌ ತಂಡದ ಗ್ರೇಸ್‌ ಹ್ಯಾರಿಸ್‌ ಅವರು ಹೊಸ ನಿಯಮದಡಿ ಡಿಆರ್‌ಎಸ್ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT