ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದು ಮಾತನಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ವೇಗಿ ಪ್ರಿನ್ಸ್ ಯಾದವ್ ‘ಕಳೆದ ಪಂದ್ಯದಲ್ಲಿ ವಿರಾಟ್ ಅವರೇ ಹೀಗೆ ಬೌಲ್ ಮಾಡಲು ಸಲಹೆ ನೀಡಿದ್ದರು’ ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ಮುಕ್ತಾಯಗೊಂಡ 2026ರ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲ್ಲುವ ಮೂಲಕ ಪ್ಲೇ–ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮಾತ್ರವಲ್ಲದೆ ಈ ಪಂದ್ಯದಲ್ಲಿ ಪ್ರಿನ್ಸ್ ಯಾದವ್ ಎದುರಾಳಿ ತಂಡದ ಪ್ರಮುಖ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಂದ್ಯದ ಬಳಿಕ ಮಾತನಾಡಿರುವ ಪ್ರಿನ್ಸ್ ಯಾದವ್, ವಿರಾಟ್ ಅವರಿಗೆ ಕ್ರೆಡಿಟ್ ನೀಡಿದ್ದಾರೆ. ಇದೇ ಆವೃತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಲಖನೌ ತಂಂಡ ಸೋಲು ಅನುಭವಿಸಿತ್ತು. ಆ ವೇಳೆ ಪ್ರಿನ್ಸ್ ಯಾದವ್ ವಿರಾಟ್ ಕೊಹ್ಲಿ ಅವರಿಂದ ಬೌಲಿಂಗ್ ಕುರಿತ ಕೆಲ ಸಲಹೆಗಳನ್ನು ಪಡೆದುಕೊಂಡಿದ್ದರು.

‘ವಿರಾಟ್ ಅವರ ಬಳಿ ಹೋಗಿ ಬೌಲಿಂಗ್ ಕುರಿತು ಒಂದಷ್ಟು ಸಲಹೆ ಕೇಳಿದ್ದೆ. ಆಗ ವಿರಾಟ್ ಅವರು ಚೆಂಡನ್ನು ಉತ್ತಮ ಲೈನ್ ಹಾಗೂ ಲೆಂತ್ನಲ್ಲಿ ಹಾಕುವಂತೆ ಸಲಹೆ ನೀಡಿದ್ದರು. ಅವರ ಮಾತುಗಳೇ ನನಗೆ ಸ್ಫೂರ್ತಿಯಾಗಿವೆ. ಅವರು ಹೇಳಿದಂತೆಯೇ ಈ ಪಂದ್ಯದಲ್ಲಿ ಬೌಲ್ ಮಾಡಿದೆ. ವಿಕೆಟ್ ಕೂಡ ಸಿಕ್ಕಿದೆ’ ಎಂದಿದ್ದಾರೆ.

2023 ರಿಂದ ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ ಸೊನ್ನೆ ಸುತ್ತಿರಲಿಲ್ಲ. 3 ವರ್ಷಗಳ ಬಳಿಕ ಮೊದಲ ಬಾರಿಗೆ ಡಕ್ ಔಟ್ ಆಗಿದ್ದಾರೆ. ಸದ್ಯ ಪ್ರಿನ್ಸ್ ಯಾದವ್ ವಿರಾಟ್ ಅವರ ವಿಕೆಟ್ ಪಡೆದುಕೊಂಡ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.