ಸೋಮವಾರ, ನವೆಂಬರ್ 18, 2019
25 °C

ವೇಗದ ದ್ವಿಶತಕ ದಾಖಲಿಸಿ ವಿಶ್ವದಾಖಲೆ ಬರೆದ ಮುಂಬೈ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್

Published:
Updated:
Yashasvi Jaiswal

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್ ತಂಡದ ವಿರುದ್ಧ ವೇಗದ ದ್ವಿಶತಕ ದಾಖಲಿಸಿ ಮುಂಬೈ ತಂಡದ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ವಿಶ್ವ ದಾಖಲೆ ಬರೆದಿದ್ದಾರೆ. 

 ಲಿಸ್ಟ್ ಎ ಮತ್ತು ಏಕದಿನದ 50 ಓವರ್‌ಗಳ ಪಂದ್ಯಗಳಲ್ಲಿ ಅತೀ ವೇಗದ ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮೆನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಜೈಸ್ವಾನ್. ಈತನ ವಯಸ್ಸು 17 ವರ್ಷ 292 ದಿನಗಳು. 

ಈ ಹಿಂದೆ 1975ರಲ್ಲಿ ಅಲನ್ ಬರೊ ಅವರು ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಆಗ ಅವರ ವಯಸ್ಸು 20 ಆಗಿತ್ತು.

ಬೆಂಗಳೂರಿನ ಆಲೂರ್‌ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ  ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಮುಂಬೈ ತಂಡ  3 ವಿಕೆಟ್ ಕಳೆದುಕೊಂಡು 358 ರನ್ ದಾಲಿಸಿದೆ. ಇದರಲ್ಲಿ ಯಶಸ್ವಿ ಜೈಸ್ವಾಲ್ 154 ಬಾಲ್ ಎದುರಿಸಿದ್ದು 12 ಸಿಕ್ಸರ್ ಮತ್ತು17 ಬೌಂಡರಿಗಳ ಸಹಾಯದಿಂದ  203 ರನ್ ದಾಖಲಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಯಶಸ್ವಿ ದಾಖಲಿಸಿದ ಮೂರನೇ ಶತಕ ಇದಾಗಿದೆ.  ಈ ಪಂದ್ಯದ ಮೂಲಕ ಎ ಲಿಸ್ಟ್‌ನಲ್ಲಿ ಪಾದರ್ಪಣೆ ಮಾಡಿದ ಜೈಸ್ವಾಲ್ 5 ಪಂದ್ಯಗಳ್ಲಿ 585 ರನ್ ದಾಖಲಿಸಿದ್ದಾರೆ.  ಪ್ರಸ್ತುತ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮೆನ್ ಕೂಡಾ ಇವರೇ.

ಇದನ್ನೂ ಓದಿ:  ವಿಜಯ್ ಹಜಾರೆ ಟ್ರೋಫಿ: ಸಂಜು ಸ್ಯಾಮ್ನಸ್ ಅಬ್ಬರದ ದ್ವಿಶತಕ

 ಕೇರಳದ ಸಂಜು ಸ್ಯಾಮ್ಸನ್ ವೇಗದ  ದ್ವಿಶತಕ ದಾಖಲಿಸಿದ ಬೆನ್ನಲ್ಲೇ ಜೈಸ್ವಾಲ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ  ಲಿಸ್ಟ್ ಎ  ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್  ಶರ್ಮಾ (ಮೂರು ಬಾರಿ ), ಶಿಖರ್ ಧವನ್, ಕೆ.ವಿ ಕೌಶನ್ ಮತ್ತು ಸಂಜು ಸ್ಯಾಮ್ಸನ್ ನಂತರ ದ್ವಿಶತಕ ಬಾರಿಸಿದ 7ನೇ ಬ್ಯಾಟ್ಸ್‌ಮೆನ್ ಆಗಿದ್ದಾರೆ.

ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌: ಹಳೆ ಸ್ನೇಹಿತರ ಮುಖಾಮುಖಿ

ಪ್ರತಿಕ್ರಿಯಿಸಿ (+)