ಗುರುವಾರ , ಆಗಸ್ಟ್ 22, 2019
27 °C
ನ್ಯೂಜಿಲೆಂಡ್ ಇಲೆವನ್ ಎದುರಿನ ಅಭ್ಯಾಸ ಪಂದ್ಯ; ಯಂಗ್‌ ಸ್ಫೋಟಕ ಶತಕ ವ್ಯರ್ಥ

ಕಾಡಿದ ಬೆಳಕು: ಆಸ್ಟ್ರೇಲಿಯಾ ಇಲೆವನ್‌ಗೆ ಸರಣಿ ಜಯ

Published:
Updated:
Prajavani

ಬ್ರಿಸ್ಬೇನ್‌: ಸ್ಟೀವ್ ಸ್ಮಿತ್ ಮತ್ತೊಮ್ಮೆ ಮಿಂಚಿನ ಬ್ಯಾಟಿಂಗ್ ಮಾಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಪ್ರೇಕ್ಷಕರನ್ನು ರಂಜಿಸಿದರು. ಇವರಿಬ್ಬರ ಉತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ ಇಲೆವನ್‌ ತಂಡ ಗೆಲುವಿನ ನಗೆ ಬೀರಿತು.

ನ್ಯೂಜಿಲೆಂಡ್‌ ಇಲೆವನ್‌ ಎದುರಿನ ಕೊನೆಯ ಅಭ್ಯಾಸ ಪಂದ್ಯದಲ್ಲಿ ಆತಿಥೇಯರು ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಐದು ವಿಕೆಟ್‌ಗಳಿಂದ ಗೆದ್ದಿತು. ಈ ಮೂಲಕ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿತು.

ಮಂದ ಬೆಳಕು ಕಾಡಿದ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ (ಅಜೇಯ 91; 108 ಎಸೆತ, 10 ಬೌಂಡರಿ) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (70; 48 ಎ, 3 ಸಿ, 6 ಬೌಂ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ಇಲೆವನ್‌ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 286 ರನ್‌ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ ಐದು ವಿಕೆಟ್‌ಗೆ 248 ರನ್‌ ಗಳಿಸಿತು. ಈ ಸಂದರ್ಭದಲ್ಲಿ ಬೆಳಕಿನ ಅಭಾವ ಕಾಡಿತು. ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದಡಿ ಆತಿಥೇಯರನ್ನು ವಿಜಯಿ ತಂಡ ಎಂದು ಘೋಷಿಸಲಾಯಿತು.

ನ್ಯೂಜಿಲೆಂಡ್‌ ‍ಪರ ವಿಲ್‌ ಯಂಗ್‌ ಮತ್ತೆ ಶತಕ ಸಿಡಿಸಿ ಮಿಂಚಿದರು. ಪ್ಯಾಟ್‌ ಕಮಿನ್ಸ್‌ ಹಾಗೂ ಮಿಷೆಲ್‌ ಸ್ಟಾರ್ಕ್‌ ಒಳಗೊಂಡ ವೇಗದ ದಾಳಿಗೆ ದಿಟ್ಟ ಉತ್ತರ ನೀಡಿದ ಅವರು 111 (108 ಎ, 3 ಸಿ, 13 ಬೌಂ) ರನ್‌ ಗಳಿಸಿದರು. ಆರಂಭಿಕ ಆಟಗಾರ ಜಾರ್ಜ್‌ ವರ್ಕರ್‌ (59) ಯಂಗ್‌ಗೆ ಉತ್ತಮ ಸಹಕಾರ ನೀಡಿದರು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್:
50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 286
ವಿಲ್‌ ಯಂಗ್‌ 111, ಜಾರ್ಜ್‌ ವರ್ಕರ್‌ 59; ಪ್ಯಾಟ್‌ ಕಮಿನ್ಸ್‌ 32ಕ್ಕೆ4

ಆಸ್ಟ್ರೇಲಿಯಾ: 44 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 248
ಸ್ಟೀವ್‌ ಸ್ಮಿತ್‌ ಅಜೇಯ 91, ಗ್ಲೆನ್‌ ಮ್ಯಾಕ್ಸ್‌ವೆಲ್‌ 70

ಫಲಿತಾಂಶ: ಆಸ್ಟ್ರೇಲಿಯಾಗೆ ಐದು ವಿಕೆಟ್‌ ಜಯ.

Post Comments (+)