ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ಕ್ರಿಕೆಟ್ | ಹಾರ್ದಿಕ್ ರಾಜ್ ಆಲ್‌ರೌಂಡ್ ಆಟ: ಭಾರತಕ್ಕೆ ಸರಣಿ

Published : 26 ಸೆಪ್ಟೆಂಬರ್ 2024, 16:27 IST
Last Updated : 26 ಸೆಪ್ಟೆಂಬರ್ 2024, 16:27 IST
ಫಾಲೋ ಮಾಡಿ
Comments

ಪುದುಚೇರಿ: ಕನ್ನಡಿಗ ಹಾರ್ದಿಕ್ ರಾಜ್ (55ಕ್ಕೆ3 ಮತ್ತು 30 ರನ್) ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತ 19 ವರ್ಷದೊಳಗಿನವರ ತಂಡವು ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡದ ಎದುರಿನ ಸರಣಿಯ ಮೂರನೇ ಪಂದ್ಯದಲ್ಲಿ ಜಯಿಸಿತು. ಇದರೊಂದಿಗೆ 3–0ಯಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು. 

ಪುದುಚೇರಿ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ಯುವ ತಂಡವು 7 ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು ರುದ್ರ ಪಟೇಲ್ (77; 81ಎ) ಮತ್ತು ಮೊಹಮ್ಮದ್ ಅಮಾನ್ (71; 72ಎ) ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 324 ರನ್‌ ಗಳಿಸಿತು. 

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಯುವ ತಂಡದ ನಾಯಕ ಒಲಿವರ್ ಪೀಕೆ (111; 115ಎ, 4X9, 6X2) ಮತ್ತು ಸ್ಟೀವನ್ ಹೊಗನ್ (104; 84ಎ, 4X10, 6X4) ಅವರು ಶತಕ ಗಳಿಸಿದರು. ಇದರಿಂದಾಗಿತ ತಂಡವು ಗೆಲುವಿನ ಸನಿಹ ಸಾಗಿತ್ತು. ಆದರೆ ಹಾರ್ದಿಕ್, ಯುಧಜಿತ್ ಗುಹಾ (40ಕ್ಕೆ2) ಹಾಗೂ ಕಿರಣ ಚೊರಮಲೆ (59ಕ್ಕೆ2) ಅವರ ಬೌಲಿಂಗ್‌ ಮುಂದೆ ತಂಡವು ಗೆಲುವಿನ ಗುರಿ ಮುಟ್ಟಲಿಲ್ಲ. 

ಸಂಕ್ಷಿಪ್ತ ಸ್ಕೋರು:

ಭಾರತ: 50 ಓವರ್‌ಗಳಲ್ಲಿ 8ಕ್ಕೆ324 (ಮೊಹಮ್ಮದ್ ಅಮಾನ್ 71, ರುದ್ರ ಪಟೇಲ್ 77, ಹಾರ್ದಿಕ್ ರಾಜ್ 30)

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7ಕ್ಕೆ317 (ಒಲಿವರ್ ಪೀಕ್ 111, ಸ್ಟೀವನ್ ಹಾಗನ್ 104, ಹಾರ್ದಿಕ್ ರಾಜ್ 55ಕ್ಕೆ3, ಕಿರಣ ಚೊರ್‌ಮಲೆ 59ಕ್ಕೆ2) ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 7 ರನ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT