ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಯಾರು ಬಲ್ಲಿರೇನು? ಇವರ ಹೆಸರು ಹೇಳುವಿರೇನು?

Last Updated 26 ಜೂನ್ 2020, 14:29 IST
ಅಕ್ಷರ ಗಾತ್ರ

ಬೆಂಗಳೂರು: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿಯಾಗಿರುವ ಭಾರತ ತಂಡದ ಕ್ರಿಕೆಟಿಗರು ಒಂದೊಮ್ಮೆ ಮಹಿಳೆಯರಾಗಿದ್ದರೆ ಹೇಗೆ ಕಾಣುತ್ತಿದ್ದರು?

ಹೌದು: ಈಗ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಸ್ವಾರಸ್ಯಕರ ಚರ್ಚೆಯೊಂದು ನಡೆಯುತ್ತಿದೆ. ಮೂರು ದಿನಗಳ ಹಿಂದೆ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು, ಗ್ರಾಫಿಕ್ ಆ್ಯಪ್‌ ವೊಂದರಲ್ಲಿ ಕ್ರಿಕೆಟಿಗರನ್ನು ಹೆಣ್ಣುಮಕ್ಕಳಂತೆ ರೂಪಾಂತರಗೊಳಿಸಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು.

’ಇದರಲ್ಲಿ ನಿಮ್ಮ ಗೆಳತಿಯನ್ನಾಗಿ ಯಾರನ್ನೂ ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಹರಭಜನ್ ಸಿಂಗ್, ’ನಾನು ಭುವಿ (ಭುವನೇಶ್ವರ್ ಕುಮಾರ್) ಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ‘ ಎಂದಿದ್ದರು. ಈ ಚಿತ್ರ ಈಗ ಹಾಸ್ಯಪ್ರಸಂಗವಾಗಿ ಸಾಮಾಜಿಕ ಜಾಲತಾಣಿಗರ ಗಮನ ಸೆಳೆಯುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್, ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಗಳು ತಮ್ಮ ತಂಡಗಳ ಆಟಗಾರರ ಹೆಣ್ಣಿನ ರೂಪಾಂತರದ ಗ್ರಾಫಿಕ್ ಚಿತ್ರಗಳನ್ನು ಹಾಕಿದ್ದಾರೆ. ಇವು ಬಹಳಷ್ಟು ಜನರನ್ನು ಆಕರ್ಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT